ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ವೈಮಾನಿಕ ದಾಳಿ: ಉಕ್ರೇನ್‌ ಸೇನೆಗೆ ಭಾರಿ ನಷ್ಟ

Last Updated 26 ಮೇ 2022, 15:58 IST
ಅಕ್ಷರ ಗಾತ್ರ

ಮಾಸ್ಕೊ/ಕೀವ್: ಉಕ್ರೇನಿನ ಪೂರ್ವದಲ್ಲಿನ ಪೊಕ್ರೊವ್‌ಸ್ಕ್‌ ರೈಲು ನಿಲ್ದಾಣದಲ್ಲಿ ಅಪಾರ ಪ್ರಮಾಣದ ಯುದ್ಧೋಪಕರಣ ಮತ್ತು ಸೇನೆಯ ದೊಡ್ಡ ಘಟಕ ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿ, ಉಕ್ರೇನ್ ಸೇನೆಗೆ ಭಾರಿ ನಷ್ಟ ಮಾಡಿರುವುದಾಗಿರಷ್ಯಾ ಸೇನೆ ಗುರುವಾರ ಹೇಳಿದೆ.

ಉಕ್ರೇನ್‌ ಪಡೆಗಳಿಗೆ ಬಲ ತುಂಬಲು ಆಕ್ರಮಣಕಾರಿ ದಳವನ್ನು ರೈಲು ನಿಲ್ದಾಣಕ್ಕೆ ತಂದು ಇಳಿಸುತ್ತಿದ್ದಾಗ ರಷ್ಯಾದ ಯುದ್ಧ ವಿಮಾನಗಳು ಬಾಂಬ್‌ ದಾಳಿ ನಡೆಸಿದವು. ದಕ್ಷಿಣ ಮೈಕೋಲೈವ್ ಪ್ರದೇಶದ ನಿಪ್ರೊವ್‌ಸ್ಕೆಯಲ್ಲಿ ಉಕ್ರೇನ್‌ನ ವಿದ್ಯುನ್ಮಾನ ಗುಪ್ತಚರ ಕೇಂದ್ರವನ್ನು ನಾಶಪಡಿಸಿ, 11 ಮಂದಿ ಉಕ್ರೇನ್‌ ಸೈನಿಕರು ಮತ್ತು 15 ವಿದೇಶಿ ತಜ್ಞರನ್ನು ಕೊಲ್ಲಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಐಗೊರ್ ಕೊನಶೆಂಕೋವ್ ತಿಳಿಸಿದರು.

ಕಳೆದ 24 ತಾಸುಗಳಲ್ಲಿ ಉಕ್ರೇನಿನ 48 ತುಕಡಿಗಳು ಮತ್ತು ಶಸ್ತ್ರಾಸ್ತ್ರಗಳ ಎರಡು ಗೋದಾಮುಗಳು ಹಾಗೂ ಯುದ್ಧೋಪಕರಣಗಳನ್ನು ನಾಶಪಡಿಸಲಾಗಿದೆ.

ಉಕ್ರೇನ್‌ಅಧಿಕಾರಿಗಳ ಪ್ರಕಾರ, ಪೂರ್ವ ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾ ಪಡೆಗಳು 40 ಪಟ್ಟಣಗಳ ಮೇಲೆ ಶೆಲ್ ದಾಳಿ ನಡೆಸಿದ್ದು, 38 ಮನೆಗಳು ಮತ್ತು ಶಾಲೆ ಸೇರಿ 47 ನಾಗರಿಕ ಪ್ರದೇಶಗಳನ್ನು ನಾಶಪಡಿಸಿದೆ.

ಮತ್ತಿಬ್ಬರು ಸೈನಿಕರು ತಪ್ಪೊ‍ಪ್ಪಿಗೆ: ಯುದ್ಧಾಪರಾಧಗಳ ವಿಚಾರಣೆಯಲ್ಲಿ ಪೂರ್ವ ಉಕ್ರೇನ್‌ ಪಟ್ಟಣದ ಮೇಲೆ ಶೆಲ್ ದಾಳಿ ನಡೆಸಿ, ಸೆರೆ ಸಿಕ್ಕಿದ್ದ ಇಬ್ಬರು ರಷ್ಯಾ ಸೈನಿಕರು ಗುರುವಾರ ತಪ್ಪೊಪ್ಪಿಕೊಂಡಿದ್ದಾರೆ.

ಕೇಂದ್ರ ಉಕ್ರೇನ್‌ನ ಕೋಟೆಲೆವ್‌ಸ್ಕಾಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಯುದ್ಧ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಲೆಕ್ಸಾಂಡರ್ ಬೊಬಿಕಿನ್ ಮತ್ತು ಅಲೆಕ್ಸಾಂಡರ್ ಇವನೊವ್ ಅವರಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಟರ್‌ ಮನವಿ ಮಾಡಿದರು. ಮೇ 31ರಂದು ತೀರ್ಪು ಹೊರಬೀಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT