ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಟೊಗೆ ರಷ್ಯಾ ಪ್ರತಿತಂತ್ರ

ಪಶ್ಚಿಮದಲ್ಲಿ ಹೊಸ ಸೇನಾ ನೆಲೆಗಳ ಸ್ಥಾಪನೆ: ರಕ್ಷಣಾ ಸಚಿವ ಸರ್ಗೈ ಶೋಯಿಗು
Last Updated 20 ಮೇ 2022, 17:17 IST
ಅಕ್ಷರ ಗಾತ್ರ

ಮಾಸ್ಕೊ/ಕೀವ್‌/ಲಂಡನ್: ನ್ಯಾಟೊದ ವಿಸ್ತರಣೆಗೆ ಪ್ರತಿಯಾಗಿ ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ 12 ಹೊಸ ಸೇನಾ ಘಟಕಗಳು ಮತ್ತು ವಿಭಾಗಗಳ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೈ ಶೋಯಿಗು ಶುಕ್ರವಾರ ತಿಳಿಸಿದರು.

ಸ್ವೀಡನ್ ಮತ್ತು ಫಿನ್ಲೆಂಡ್‌ ನ್ಯಾಟೊ ಸೇರಲು ಅರ್ಜಿ ಸಲ್ಲಿಸಿರುವುದನ್ನು ವರ್ಚುವಲ್‌ ಸಭೆಯಲ್ಲಿ ಉಲ್ಲೇಖಿಸಿದ ಅವರು, ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವಬೆದರಿಕೆಗೆ ಪ್ರತಿಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ.ಸೇನೆಯುಎರಡು ಸಾವಿರಕ್ಕೂ ಹೆಚ್ಚು ಯೂನಿಟ್ ಸೇನಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೀಘ್ರವೇ ಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಉಕ್ರೇನ್‌ನಲ್ಲಿನ ಸೇನಾ ಕಾರ್ಯಾಚರಣೆಗೆ ತುರ್ತು ಬಲ ತುಂಬಲು ದೇಶದ 40 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟ ವಿದೇಶಿ ನಾಗರಿಕರನ್ನು ಸೇನೆಗೆ ಸೇರಿಸಿಕೊಳ್ಳುವ ಮಸೂದೆ ಅಂಗೀಕರಿಸುವುದಾಗಿ ರಷ್ಯಾದ ಸಂಸತ್ತು ಶುಕ್ರವಾರ ಪ್ರಕಟಿಸಿದೆ.

ಸೈನಿಕನ ಖುಲಾಸೆಗೆ ಮನವಿ: ಕೀವ್‌ ಯುದ್ಧಾಪರಾಧಗಳ ವಿಚಾರಣೆಗೆ ಒಳಗಾಗಿರುವ ಮೊದಲ ಯುದ್ಧ ಕೈದಿ, ರಷ್ಯಾದ ಸೇನಾಧಿಕಾರಿ ವಾಡಿಮ್‌ ಶಿಶಿಮರಿನ್‌ (21) ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸುವಂತೆ ಅವರ ವಕೀಲ ವಿಕ್ಟರ್ ಓವ್ಸಿಯಾನ್ನಿಕೊವ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ಮುಗಿದ ವಾದದಲ್ಲಿ ಶಿಶಿಮರಿನ್‌ ಅವರು ಯುದ್ಧ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಎಂದು ವಕೀಲರು ವಾದಿಸಿದರು. 62 ವರ್ಷದ ನಾಗರಿಕನ ತಲೆಗೆ ಗುಂಡು ಹಾರಿಸಿ ಹತ್ಯೆಗೈದ ಅಪರಾಧಕ್ಕೆ ಶಿಶಿಮರಿನ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಟರ್‌ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಹೋರಾಟ ನಿಲ್ಲಿಸಲು ಆದೇಶ: ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದಲ್ಲಿ ಉಳಿದಿರುವ ಪಡೆಗಳಿಗೆ ಹೋರಾಟ ನಿಲ್ಲಿಸಲು ಉಕ್ರೇನ್‌ ಆದೇಶಿಸಿದೆ.

ರಷ್ಯಾ ವಶದಲ್ಲಿರುವ ಉಕ್ಕಿನ ಸ್ಥಾವರದಲ್ಲಿನ ಯೋಧರನ್ನು ಕೈದಿಗಳ ವಿನಿಮಯದಡಿ ರಕ್ಷಿಸಿಕೊಳ್ಳಲು ಮತ್ತು ಸ್ಥಾವರದಲ್ಲಿ ಹುತಾತ್ಮರಾದ ಯೋಧರನ್ನು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಉನ್ನತ ಕಮಾಂಡರ್‌ ಈ ಆದೇಶ ನೀಡಿರುವುದಾಗಿಅಜೋವ್‌ಸ್ಟಾಲ್‌ ಬೆಟಾಲಿಯನ್‌ ಕಮಾಂಡರ್ ಶುಕ್ರವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT