ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ: ಜಾಗರೂಕರಾಗಿರಲು ಜನತೆಗೆ ಎಚ್ಚರಿಕೆ ನೀಡಿದ ಉಕ್ರೇನ್‌ ಅಧ್ಯಕ್ಷ

Last Updated 21 ಆಗಸ್ಟ್ 2022, 3:25 IST
ಅಕ್ಷರ ಗಾತ್ರ

ಕೀವ್: ಸ್ವಾತಂತ್ರ್ಯ ದಿನಾಚರಣೆ (ಆ.24) ಅಂಗವಾಗಿ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ -ರಷ್ಯಾ ಸೇನಾಪಡೆಗಳ ನಡುವೆ ದಾಳಿ ಮುಂದುವರಿದಿದ್ದು, ನಾಗರಿಕರು ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ರಿಮಿಯಾ ಪ್ರದೇಶದಲ್ಲಿ ರಷ್ಯಾ ಆಕ್ರಮಿತ ಅಣುಸ್ಥಾವರ ಪ್ರದೇಶಗಳ ಸಮೀಪ ರಷ್ಯಾ ನಡೆಸಿದ ರಾಕೆಟ್‌ ದಾಳಿಯಲ್ಲಿ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ಕೇಂದ್ರ ಉಕ್ರೇನ್‌ನ ಡಿನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದಲ್ಲಿ ರಷ್ಯಾ ನಡೆಸಿದ ರಾಕೆಟ್‌ ದಾಳಿಯಲ್ಲಿ 13 ಮಂದಿ ನಾಗರಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದರು.ಈ ಎಲ್ಲ ಬೆಳವಣಿಗೆಗಳ ನಡುವೆ ಉಕ್ರೇನ್‌ ಸೇನೆಯು, ರಷ್ಯಾದ ವಿರುದ್ಧ ಪ್ರತಿ ದಾಳಿ ಮುಂದುವರಿಸಿದೆ.

‘ಉಕ್ರೇನ್‌ ಮತ್ತು ಯುರೋಪ್ ವಿರುದ್ಧದ ರಷ್ಯಾದ ಯುದ್ಧ ಕ್ರಿಮಿಯಾ ಮೂಲಕ ಆರಂಭವಾಗಿದೆ. ಅದು ಕ್ರಿಮಿಯಾ ಮೂಲಕವೇ ಮುಕ್ತಾಯವಾಗಬೇಕು–ಇದು ಸ್ವಾತಂತ್ರ್ಯ’ ಎಂದು ಝೆಲೆನ್‌ಸ್ಕಿ ತಿಳಿಸಿದ್ದರು.

ಆಗಸ್ಟ್ 24ರಂದು ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT