ಮಾರಿಯುಪೋಲ್: ದಕ್ಷಿಣ ಉಕ್ರೇನ್‌ನ ಬಂದರು ನಗರವಾದ ಮಾರಿಯುಪೋಲ್‌ನ ಮಸೀದಿಯೊಂದರ ಮೇಲೆ ರಷ್ಯಾದ ಪಡೆಗಳು ಶನಿವಾರ ಶೆಲ್ ದಾಳಿ ನಡೆಸಿವೆ.

ಈ ಕುರಿತು ಉಕ್ರೇನ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ ಎಂದು ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ.

ರಷ್ಯಾ ಪಡೆಗಳಿಂದ ಶೆಲ್ ದಾಳಿಗೆ ಒಳಗಾದ ಮಸೀದಿಯಲ್ಲಿ 80 ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ಅದರಲ್ಲಿ ಮಕ್ಕಳು, ವಯಸ್ಕರು ಹಾಗೂ ಟರ್ಕಿಶ್ ನಾಗರಿಕರು ಸೇರಿದ್ದಾರೆ. ಸಾವುನೋವುಗಳ ಕುರಿತು ಮಾಹಿತಿ ಹೊರಬರಬೇಕಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.

ಇದೇ ವೇಳೆ, ಮಾರಿಯುಪೋಲ್‌ನಿಂದ ಜನರನ್ನು ಹೊರಗೆ ಬಿಡಲು ರಷ್ಯಾ ನಿರಾಕರಿಸಿದೆ ಎಂದು ಉಕ್ರೇನ್ ಆರೋಪಿಸಿದೆ.

ಅಜೋವ್ ಸಮುದ್ರ ತೀರದ, 4,50,000 ಜನಸಂಖ್ಯೆ ಇರುವ ಮಾರಿಯುಪೋಲ್ ಮೇಲೆ ಶೆಲ್ ದಾಳಿ ನಡೆಯುತ್ತಿದೆ. ತೀವ್ರ ಚಳಿಗಾಲದ ನಡುವೆಯೇ ನಗರಕ್ಕೆ ನೀರು, ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ-ಪಾಶ್ಚಾತ್ಯರ ನಿರ್ಬಂಧಗಳು ಬಾಹ್ಯಾಕಾಶ ನಿಲ್ದಾಣದ ಪತನಕ್ಕೆ ಕಾರಣವಾಗಬಹುದು: ರಷ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.