ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷದ ಒಳಗಿನ ಬಾಲಕಿಯರ ಮೇಲೆ ರಷ್ಯಾ ಸೈನಿಕರ ಅತ್ಯಾಚಾರ: ಉಕ್ರೇನ್‌ ಗಂಭೀರ ಆರೋಪ

Last Updated 4 ಏಪ್ರಿಲ್ 2022, 10:26 IST
ಅಕ್ಷರ ಗಾತ್ರ

ಕೀವ್‌: ಮಿಲಿಟರಿ ಕಾರ್ಯಾಚರಣೆ ಕೈಗೊಂಡಿರುವ ರಷ್ಯಾ ಸೈನಿಕರು 10 ವರ್ಷದ ಒಳಗಿನ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಉಕ್ರೇನ್‌ ಆರೋಪಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಉಕ್ರೇನ್‌ ಸಂಸದೆ ಲೆಸಿಯಾ ವಾಸಿಲೆಂಕೊ, ‘ರಷ್ಯಾದ ಸೈನಿಕರು ಲೂಟಿ, ಅತ್ಯಾಚಾರ ಮತ್ತು ಹತ್ಯೆಗಳಲ್ಲಿ ತೊಡಗಿದ್ದಾರೆ. 10 ವರ್ಷದ ಒಳಗಿನ ಬಾಲಕಿಯರ ಮೇಲೆಯೂ ಅತ್ಯಾಚಾರ ಎಸಗಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಎಲ್ಲ ಅಪರಾಧಗಳನ್ನು ಎಸಗಿದ್ದು ರಷ್ಯಾದ ಗಂಡಸರು. ಈ ಗಂಡಸರನ್ನು ಬೆಳೆಸಿದ್ದು ರಷ್ಯಾದ ತಾಯಂದಿರು. ಇದು ಅನೈತಿಕ ಅಪರಾಧಿಗಳಿಂದ ಕೂಡಿದ ರಾಷ್ಟ್ರವೆಂದು ವಾಸಿಲೆಂಕೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ತಮ್ಮ ದೇಶದಲ್ಲಿ ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಆರೋಪಿಸಿದ್ದರು.

ಫೆ.24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT