ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ-ಉಕ್ರೇನ್‌ ಯುದ್ಧ: ಈಗಾಗಲೇ ಮೂರನೇ ವಿಶ್ವಸಮರ ಪ್ರಾರಂಭ?

Last Updated 16 ಏಪ್ರಿಲ್ 2022, 5:06 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ಕೀರ್ತಿ ಪತಾಕೆಯಂತಿದ್ದ ‘ಮಾಸ್ಕವಾ’ಸಮರನೌಕೆಯು ಉಕ್ರೇನಿನ ನೆಪ್ಚೂನ್‌ಕ್ಷಿಪಣಿ ದಾಳಿಗೆ ಸಿಕ್ಕಿ, ಕಪ್ಪು ಸಮುದ್ರದಲ್ಲಿ ಮುಳುಗಿದ ನಂತರ ‘ಮೂರನೇ ವಿಶ್ವಸಮರ ಈಗಾಗಲೇ ಅಧಿಕೃತವಾಗಿ ಪ್ರಾರಂಭವಾಗಿದೆ’ ಎಂದುರಷ್ಯಾದ ಸರ್ಕಾರಿ ಸ್ವಾಮ್ಯದ ದೂರದರ್ಶನ ‘ಓಗಾ ಸ್ಕಬೀವಾ’ ಶುಕ್ರವಾರ ಘೋಷಿಸಿದೆ.

ಕಪ್ಪು ಸಮುದ್ರದಲ್ಲಿಗುರುವಾರ ಮಾಸ್ಕವಾ ಸಮರನೌಕೆಗೆಬೆಂಕಿ ಹೊತ್ತಿ, ನೌಕೆಗೆ ಹಾನಿಯಾಗಿತ್ತು. ಬೆಂಕಿ ನಂದಿಸಿದ ನಂತರ ನೌಕೆ ಸಮುದ್ರದಲ್ಲಿ ತೇಲುತ್ತಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಆರಂಭದಲ್ಲಿ ಹೇಳಿತ್ತು. ಆದರೆ, ತಡರಾತ್ರಿ ವೇಳೆಗೆ ಹವಾಮಾನದ ವೈಪರೀತ್ಯದಿಂದಾಗಿ ನೌಕೆಯನ್ನು ಸುರಕ್ಷಿತವಾಗಿ ಬಂದರಿಗೆ ತರಲು ಸಾಧ್ಯವಾಗಿಲ್ಲ ಎಂದು ರಷ್ಯಾ ನೌಕಾಪಡೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿತು.

‘ನೆಪ್ಚೂನ್ ಕ್ಷಿಪಣಿಯ ಮೂಲಕ ರಷ್ಯಾದ ಪ್ರಮುಖ ನೌಕೆಯನ್ನು ನಾಶಪಡಿಸಲಾಗಿದೆ’ ಎಂದು ಉಕ್ರೇನ್ ಹೇಳಿಕೊಂಡಿದೆ. ‌ಮರು ದಿನವೇ, ಮುಳುಗುತ್ತಿರುವ ‘ಮಾಸ್ಕವಾ’ದ ಚಿತ್ರವಿರುವ ‘ಸ್ಮರಣಾರ್ಥ ಸ್ಟ್ಯಾಂಪ್‌’ ಅನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಬಿಡುಗಡೆ ಮಾಡಿ, ತಮ್ಮ ಸೇನಾ ಪಡೆಗಳ ಶೌರ್ಯವನ್ನು ಪ್ರಶಂಸಿಸಿದ್ದಾರೆ.

ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ ಮುಖವಾಣಿ ‘ಓಗಾ ಸ್ಕಬೀವಾ’ ಟಿ.ವಿಯ ನಿರೂಪಕರು, ಯುದ್ಧ ನೌಕೆ ಮುಳುಗಿದ ಸುದ್ದಿಯನ್ನು ವೀಕ್ಷಕರಿಗೆ ತಿಳಿಸುವಾಗ ‘ಮೂರನೇ ಮಹಾಯುದ್ಧ ಈಗಾಗಲೇ ಶುರುವಾಗಿದೆ’ ಎಂದು ಘೋಷಿಸಿದರು.

‘ಈಗ ನಾವು ನ್ಯಾಟೊ ವಿರುದ್ಧವಷ್ಟೇ ಅಲ್ಲ, ಅದರ ಮೂಲಸೌಕರ್ಯಗಳವಿರುದ್ಧ ಖಂಡಿತವಾಗಿಯೂ ಹೋರಾಡುತ್ತಿದ್ದೇವೆ’ ಎಂದು ‘ಓಗಾ ಸ್ಕಬೀವಾ’ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ನಿರೂಪಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT