ಶನಿವಾರ, ಮೇ 21, 2022
25 °C

ಉಕ್ರೇನ್ ಮೇಲೆ ದಾಳಿ ಖಂಡಿಸಿದ ನಿರ್ದೇಶಕರ ಪ್ರದರ್ಶನ ರದ್ದು ಮಾಡಿದ ರಷ್ಯಾ ಥಿಯೇಟರ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮಾಸ್ಕೋ: ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾದ ಕ್ರಮವನ್ನು ಟೀಕಿಸಿದ್ದ ರಂಗ ನಿರ್ದೇಶಕರಾದ ಕಿರಿಲ್‌ ಸೆರೆಬ್ರೆನ್ನಿಕೋವ್‌ ಮತ್ತು ಟಿಮೊಫೇ ಕುಲ್ಯಾಬಿನ್‌ ಅವರು ಸಂಯೋಜಿಸಿರುವ ಪ್ರದರ್ಶನಗಳನ್ನು 'ಬೊಲ್ಶೋಯ್‌' ಥಿಯೇಟರ್‌ ರದ್ದುಪಡಿಸಿದೆ.

ರಷ್ಯಾದ ಪ್ರಮುಖ ಥಿಯೆಟರ್‌ಗಳಲ್ಲಿ ಒಂದಾಗಿರುವ 'ಬೊಲ್ಶೋಯ್‌', ನಿರ್ದೇಶಕ ಸೆರೆಬ್ರೆನ್ನಿಕೋವ್‌ ಸಂಯೋಜಿಸಿರುವ 'ನುರೀವ್' ಬ್ಯಾಲೆ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ. ಪ್ರೇಕ್ಷಕರು ಈ ವಾರ ಅರಾಮ್ ಖಚಟುರಿಯಾನ್‌ ಅವರು 'ಸ್ಪಾರ್ಟಕಸ್‌' ಪ್ರದರ್ಶನ ವೀಕ್ಷಿಸಬಹುದಾಗಿದೆ ಎಂದು ಭಾನುವಾರ ಪ್ರಕಟಿಸಿದೆ

ಅದೇರೀತಿ, ಟಿಮೊಫೇ ಕುಲ್ಯಾಬಿನ್‌ ಸಂಯೋಜಿಸಿದ್ದ, ಗಾಯ್ಟೆನೊ ಡಾನಿಜೆಟ್ಟಿ ಅವರ ಗೀತೆರೂಪದ ನಾಟಕ 'ಡಾನ್‌ ಪಾಸ್‌ಕ್ವಾಲೆ' ಪ್ರದರ್ಶನವನ್ನೂ ರದ್ದುಪಡಿಸಲಾಗಿದೆ. ಅದರ ಬದಲು ಗಿಯೊಚಿನೊ ರೊಸ್ಸಿನಿ ಅವರ 'ದಿ ಬಾರ್ಬೆರ್‌ ಆಫ್‌ ಸೆವಿಲ್ಲೆ' ಪ್ರದರ್ಶನ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದೆ.

ಪ್ರದರ್ಶನಗಳನ್ನು ರದ್ದುಪಡಿಸಿದ್ದೇಕೆ ಎಂದು 'ಬೊಲ್ಶೋಯ್‌' ಕಾರಣ ನೀಡಿಲ್ಲ.

ಈ ಥಿಯೆಟರ್‌ನಲ್ಲಿ 'ಸ್ಪಾರ್ಟಕಸ್‌' ಪ್ರದರ್ಶವನ್ನು ಏಪ್ರಿಲ್‌ನಲ್ಲಿಯೂ ಆಯೋಜಿಸಲಾಗಿತ್ತು. ಇದರಿಂದ ಬರುವ ಆದಾಯವನ್ನು ಉಕ್ರೇನ್‌ನಲ್ಲಿ ಮೃತಪಟ್ಟ ರಷ್ಯಾ ಯೋಧರ ಕುಟುಂಬದವರಿಗೆ ನೆರವಾಗಲು ಬಳಸಲಾಗುವುದು ಎಂದು ಪ್ರಕಟಿಸಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಉಕ್ರೇನ್‌ನಲ್ಲಿ ಫೆಬ್ರುವರಿ 24ರಂದು ಸೇನಾ ಕಾರ್ಯಾಚರಣೆಗೆ ಆರಂಭಿಸಲು ಕರೆ ನೀಡಿದ್ದರು. ಈ ನಿರ್ಧಾರವನ್ನು 52 ವರ್ಷದ ಸೆರೆಬ್ರೆನ್ನಿಕೋವ್‌ ಮತ್ತು 37 ವರ್ಷದ ಕುಲ್ಯಾಬಿನ್‌ ಅವರು ಟೀಕಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು