ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಕಿವ್‌ನಲ್ಲಿ ಎರಡು ಅನಿಲ ವಿತರಣಾ ಕೇಂದ್ರಗಳನ್ನು ಪುನರಾರಂಭಿಸಿದ ಉಕ್ರೇನ್‌

Last Updated 16 ಮೇ 2022, 1:45 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್‌): ಹಾರ್ಕಿವ್‌ ಪ್ರಾಂತ್ಯದಲ್ಲಿರುವ ಎರಡು ಅನಿಲ ವಿತರಣಾ ಕೇಂದ್ರಗಳನ್ನು ಪುನರಾರಂಭಿಸಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಅನಿಲ ಸರಬರಾಜು ಮಾಡಲಾಗುವುದು ಎಂದುಉಕ್ರೇನ್‌ನ ಅನಿಲ ಪೂರೈಕೆ ವ್ಯವಸ್ಥೆಯಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ ದಾಳಿಯ ಪರಿಣಾಮ ಹಾರ್ಕಿವ್‌ನಲ್ಲಿನ ಎರಡು ಪ್ರಮುಖ ಅನಿಲ ಪೈಪ್‌ಲೈನ್‌ಗಳಿಗೆ ಹಾನಿಯಾಗಿತ್ತು. ಇದರಿಂದಾಗಿ ಇವುಗಳನ್ನು ಮುಚ್ಚಲಾಗಿತ್ತು. ಇದೀಗ ಹಾನಿಯನ್ನು ಸರಿಪಡಿಸಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಉಕ್ರೇನ್‌ ಏಳು ಪ್ರಾಂತ್ಯಗಳಲ್ಲಿರುವ 54 ಅನಿಲ ವಿತರಣಾ ಕೇಂದ್ರಗಳು ಇನ್ನೂ ಮುಚ್ಚಿದ ಸ್ಥಿತಿಯಲ್ಲಿಯೇ ಇವೆ ಎಂದೂ ತಿಳಿಸಲಾಗಿದೆ.

ರಷ್ಯಾ ಸೇನೆ, ಫೆಬ್ರುವರಿ 24ರಂದು ಉಕ್ರೇನ್‌ನಲ್ಲಿ ಆಕ್ರಮಣ ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT