ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ಪಾಶ್ಚಾತ್ಯರ ಶಸ್ತ್ರಾಸ್ತ್ರ ನೆರವು: ರಷ್ಯಾ ದಾಳಿ ತೀವ್ರ

Last Updated 30 ಏಪ್ರಿಲ್ 2022, 18:53 IST
ಅಕ್ಷರ ಗಾತ್ರ

ಕೀವ್‌ (ಎಎಫ್‌ಪಿ, ರಾಯಿಟರ್ಸ್‌): ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗದ ಮೇಲಿನ ಹಿಡಿತಕ್ಕೆ ರಷ್ಯಾ ದಾಳಿ ತೀವ್ರಗೊಳಿಸಿದೆ. ಹಾರ್ಕಿವ್‌ ನಗರದ ಮೇಲೂ ಶನಿವಾರ ನಿರಂತರ ಶೆಲ್‌ ದಾಳಿ ನಡೆದಿದೆ. ಉಕ್ರೇನ್‌ ಕೂಡ ಪ್ರತಿರೋಧ ಮುಂದುವರಿಸಿದ್ದು, ರಷ್ಯಾದ ಹಳ್ಳಿ ಮೇಲೆ ಕ್ಷಿಪಣಿ ಉಡಾಯಿಸಿದೆ. ‌

ಪ್ರತಿರೋಧಕ್ಕೆ ಸೀಮಿತವಾಗಿದ್ದ ಉಕ್ರೇನ್‌, ಪಾಶ್ಚಾತ್ಯರ ಭಾರಿ ಶಸ್ತ್ರಾಸ್ತ್ರಗಳು ಕೈಸೇರಿದ ಮೇಲೆ ರಷ್ಯಾದ ನೆಲದ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಬ್ರಿಯಾನ್‌ಸ್ಕ್‌ ಪ್ರದೇಶದ ಜಿಚೆನಾ ಬಳಿಯ ತೈಲ ಘಟಕಕ್ಕೆ ಉಕ್ರೇನ್‌ನ ಎರಡು ಕ್ಷಿಪಣಿಗಳು ಅಪ್ಪಳಿಸಿವೆ. ಉಕ್ರೇನಿನ ಯುದ್ಧ ವಿಮಾನಗಳು ರಷ್ಯಾ ಗಡಿ ಪ್ರವೇಶಿಸಿರುವುದು ಕಂಡುಬಂದಿದೆ ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಜ್ ತಿಳಿಸಿದ್ದಾರೆ.

‘ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ರಷ್ಯಾ ಪಡೆಗಳನ್ನು ಹಿ‍ಮ್ಮೆಟ್ಟಿಸುವ ಕಾರ್ಯತಂತ್ರದಲ್ಲಿ ಯಶಸ್ವಿಯಾಗಿದ್ದೇವೆ. ಹಾರ್ಕಿವ್‌ ನಮ್ಮ ನಿಯಂತ್ರಣದಲ್ಲೇ ಇದೆ. ಆದರೂ, ರಷ್ಯಾದ ನಿರಂತರ ದಾಳಿಯಿಂದ ಇಡೀ ನಗರ ಜರ್ಜರಿತವಾಗಿದೆ’ ಎಂದುಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ಕೀವ್‌ಗೆ ಭೇಟಿ ನೀಡಿದ್ದಾಗಲೇ ಆ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದನ್ನು ರಷ್ಯಾ ಒಪ್ಪಿಕೊಂಡಿದೆ.

ಜಿ–20 ಶೃಂಗಸಭೆಗೆ ಆಹ್ವಾನ: ಇಂಡೊನೇಷ್ಯಾದಲ್ಲಿ ನವೆಂಬರ್‌ನಲ್ಲಿ ನಡೆಯುವ ಜಿ20 ಶೃಂಗಸಭೆಗೆ ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನು ಆಹ್ವಾನಿಸಲಾಗಿದೆ.

ಪುಟಿನ್‌ ಅವರನ್ನು ಆಹ್ವಾನಿಸಿರುವುದಕ್ಕೆ ಅಸಮಾಧಾನಗೊಂಡಿರುವ ಅಮೆರಿಕ, ಜಿ20 ಸದಸ್ಯ ರಾಷ್ಟ್ರವಲ್ಲದ ಉಕ್ರೇನ್‌ಗೆ ಆಹ್ವಾನ ನೀಡಿರುವುದನ್ನು ಸ್ವಾಗತಿಸಿದೆ. ಜಿ–20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಪುಟಿನ್‌ ಮತ್ತು ಝೆಲೆನ್‌ಸ್ಕಿ ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT