ಗುರುವಾರ , ಮಾರ್ಚ್ 23, 2023
22 °C

ರಷ್ಯಾದಲ್ಲಿ ಜನಸಂಖ್ಯೆಯ ಪ್ರಮಾಣ 5.55 ಲಕ್ಷದಷ್ಟು ಕುಸಿತ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮಾಸ್ಕೋ: ರಷ್ಯಾದಲ್ಲಿ ಸದ್ಯ 14.64 ಕೋಟಿ ಜನರು ವಾಸವಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನಸಂಖ್ಯೆಯಲ್ಲಿ 5.55 ಲಕ್ಷದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಫೆಡರಲ್‌ ಸ್ಟ್ಯಾಟಿಸ್ಟಿಕ್ಸ್‌ ಸರ್ವೀಸ್‌ ಜನವರಿ 1 ರಂದು ಅಂಕಿ–ಅಂಶಗಳನ್ನು ಪ್ರಕಟಿಸಿದೆ.

ಸೆಂಟ್ರಲ್ ಫೆಡರಲ್ ಜಿಲ್ಲೆಯಲ್ಲಿ 4 ಕೋಟಿಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಪೈಕಿ 1.3 ಕೋಟಿ ಜನರು ರಷ್ಯಾದ ರಾಜಧಾನಿ ಮತ್ತು ಅತಿದೊಡ್ಡ ನಗರ ಮಾಸ್ಕೋದಲ್ಲೇ ನೆಲೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ವಾಯುವ್ಯ ಫೆಡರಲ್ ಜಿಲ್ಲೆಯಲ್ಲಿ 1.36 ಕೋಟಿ ಹೆಚ್ಚು ಜನರು ವಾಸಿಸುತ್ತಿದ್ದರು. 5.6 ಕೋಟಿ  ಜನರು ದೇಶದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ವಾಸಿಸುತ್ತಿದ್ದರು.

ಸುಮಾರು 10.09 ಕೋಟಿ ಜನರು ನಗರ ಪ್ರದೇಶಗಳಲ್ಲಿ  ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು