ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಮಕ್ಕಳನ್ನು ಹೆರುವವರಿಗೆ ₹ 13 ಲಕ್ಷ ಬಹುಮಾನ: ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ 

Last Updated 18 ಆಗಸ್ಟ್ 2022, 12:30 IST
ಅಕ್ಷರ ಗಾತ್ರ

ಮಾಸ್ಕೊ: ಕೋವಿಡ್‌ ಸಾಂಕ್ರಾಮಿಕ ಹಾಗೂ ಉಕ್ರೇನ್‌ ಮೇಲಿನ ಯುದ್ಧದ ಪರಿಣಾಮ ರಷ್ಯಾದಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿದ್ದು ಇದನ್ನು ಸರಿಪಡಿಸಲು 10 ಮಕ್ಕಳನ್ನು ಹೆರುವವರಿಗೆ ನಗದು ಬಹುಮಾನ ನೀಡುವುದಾಗಿಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ.

10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದು ಮತ್ತು ಅವರನ್ನು ನೋಡಿಕೊಳ್ಳುವ ಮಹಿಳೆಯರಿಗೆ ಒಂದೇ ಬಾರಿಗೆ ₹ 13 ಲಕ್ಷ (13,500 ಪೌಂಡ್) ನಗದು ಹಣ ನೀಡಲಾಗುವುದು ಎಂದು ಪುಟಿನ್‌ ಹೇಳಿದ್ದಾರೆ. ರಷ್ಯಾ ಅಧ್ಯಕ್ಷರ ಈ ಹೇಳಿಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪುಟಿನ್‌ ಅವರ ಈ ಘೋಷಣೆಯನ್ನು ಕೆಲವರು ಸ್ವಾಗತಿಸಿದ್ದಾರೆ. ಜನಸಂಖ್ಯೆಯನ್ನು ಹೆಚ್ಚಿಸಲು ಇದೊಂದು ಉತ್ತಮ ಕ್ರಮ ಎಂದು ಕೆಲವರು ಹೇಳಿದ್ದಾರೆ. ಪುಟಿನ್‌ ಅವರ ಈ ಘೋಷಣೆಹತಾಶೆಯ ಪ್ರಯತ್ನ ಎಂದು ಕೆಲ ವಿಶ್ಲೇಷಕರು ವಾದಿಸಿದ್ದಾರೆ.

ಈ ಯೋಜನೆಗೆ 'ಮದರ್ ಹೀರೋಯಿನ್' ಎಂದು ಹೆಸರಿಡಲಾಗಿದೆ. ಈ ಹಿಂದೆ ಕೂಡ ರಷ್ಯಾದಲ್ಲಿ ಇಂತಹ ಯೋಜನೆ ಚಾಲ್ತಿಯಲ್ಲಿ ಇತ್ತು. ಕೋವಿಡ್‌ನಿಂದ ಹಾಗೂ ಉಕ್ರೇನ್‌ ಮೇಲಿನ ಯುದ್ಧದಿಂದಾಗಿ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ಮತ್ತೆ ಹೆಚ್ಚಿಸುವ ಕ್ರಮವಾಗಿ ಪುಟಿನ್ ಅವರು ಈ ಯೋಜನೆ ಘೋಷಿಸಿದ್ದಾರೆ.

ಎರಡನೇ ಪ್ರಪಂಚ ಮಹಾಯುದ್ಧದಲ್ಲಿಮದರ್ ಹೀರೋಯಿನ್ ಯೋಜನೆಯನ್ನು ಹೊಸದಾಗಿ ಪರಿಚಯಿಸಲಾಗಿತ್ತು. 1991ರಲ್ಲಿ ರಷ್ಯಾ ಇಬ್ಬಾಗವಾದಾಗಈ ಯೋಜನೆಯನ್ನು ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT