ಭಾನುವಾರ, ಮೇ 22, 2022
25 °C
ಭಾರತಕ್ಕೆ ಎಸ್‌–400 ಕ್ಷಿಪಣಿ ವ್ಯವಸ್ಥೆ ಮಾರಾಟಕ್ಕೆ ಅಸಮಾಧಾನ

ಪ್ರಾದೇಶಿಕ ಅಸ್ಥಿರತೆ ಸೃಷ್ಟಿಸಲು ರಷ್ಯಾ ಯತ್ನ: ಅಮೆರಿಕ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತಕ್ಕೆ ರಷ್ಯಾ ಎಸ್‌–400 ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಮಾರಾಟ ಮಾಡುತ್ತಿದೆ. ಪ್ರಾದೇಶಿಕ ಅಸ್ಥಿರತೆಯನ್ನು ಸೃಷ್ಟಿಸಲು ರಷ್ಯಾ ಹವಣಿಸುತ್ತಿರುವುದನ್ನು ಈ ನಡೆ ತೋರಿಸುತ್ತದೆ ಎಂದು ಅಮೆರಿಕ ಟೀಕಿಸಿದೆ.

‘ರಷ್ಯಾ ಪ್ರಾದೇಶಿಕವಾಗಿ ಮಾತ್ರವಲ್ಲ ಅದರಾಚೆಗೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಹೀಗಾಗಿ ಎಸ್‌–400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಮಾರಾಟ–ಖರೀದಿಗೆ ಸಂಬಂಧಿಸಿ ನಮ್ಮ ಕಳವಳ, ನಿಲುವು ಬದಲಾಗದು’ ಎಂದು ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರೈಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕದ ಆಕ್ಷೇಪ ಹಾಗೂ ನಿರ್ಬಂಧ ಹೇರುವ ಬೆದರಿಕೆಗಳ ಹೊರತಾಗಿಯೂ ಭಾರತವು ರಷ್ಯಾ ನಿರ್ಮಿತ ಈ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುತ್ತಿದೆ. ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ಕ್ಷಿಪಣಿಯನ್ನು ಖರೀದಿ ಮಾಡಲಾಗುತ್ತಿದೆ ಎಂದು ಭಾರತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು