ಮಂಗಳವಾರ, ಜನವರಿ 25, 2022
28 °C

ಖಂಡಾಂತರ ಕ್ಷಿಪಣಿಯಂತೆ ತೋರುತ್ತಿರುವ ಕ್ಷಿಪಣಿ ಪ್ರಯೋಗ ನಡೆಸಿದ ಉತ್ತರ ಕೊರಿಯಾ

ಪಿಪಿಐ Updated:

ಅಕ್ಷರ ಗಾತ್ರ : | |

ಸಿಯೋಲ್: ಉತ್ತರ ಕೊರಿಯಾ ಮಂಗಳವಾರ ತನ್ನ ಪೂರ್ವ ಸಮುದ್ರದಲ್ಲಿ ಖಂಡಾಂತರ ಕ್ಷಿಪಣಿಯಂತೆ ತೋರುತ್ತಿರುವ ಕ್ಷಿಪಣಿಯ ಪ್ರಯೋಗ ನಡೆಸಿತು. ಇದು ಒಂದು ವಾರದಲ್ಲಿ ಉತ್ತರ ಕೊರಿಯಾ ನಡೆಸಿದ ಎರಡನೇ ಉಡಾವಣೆಯಾಗಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ಮಿಲಿಟರಿಗಳು ತಿಳಿಸಿವೆ.

ಇದು 2021ರಲ್ಲಿ ನಡೆದ ಸರಣಿ ಕ್ಷಿಫನಿ ಪ್ರಯೋಗಗಳ ಮುಂದುವರಿದ ಭಾಗವಾಗಿದ್ದು, ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮತ್ತು ಅಮೆರಿಕದ ಜೊತೆ ಪರಮಾಣು ಮಾತುಕತೆಗಳ ಕಗ್ಗಂಟಿನ ಮಧ್ಯೆ ಉತ್ತರ ಕೊರಿಯಾ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ಒತ್ತಿ ಹೇಳುತ್ತದೆ.

ಉತ್ತರ ಕೊರಿಯಾವು ಮಂಗಳವಾರ ಮುಂಜಾನೆ ಕನಿಷ್ಠ ಒಂದು ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ಖಂಡಾಂತರ ಕ್ಷಿಪಣಿಯೇ ಅಥವಾ ಎಷ್ಟು ದೂರ ಹಾರಿತು ಎಂಬುದನ್ನು ತಕ್ಷಣವೇ ತಿಳಿದಿಲ್ಲ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಉತ್ತರ ಕೊರಿಯಾದ ಶಸ್ತ್ರಾಸ್ತ್ರವು ಬಹುಶಃ ಖಂಡಾಂತರ ಕ್ಷಿಪಣಿಯಾಗಿರಬಹುದು ಎಂದು ಜಪಾನ್‌ನ ಪ್ರಧಾನ ಮಂತ್ರಿ ಕಚೇರಿ ಮತ್ತು ರಕ್ಷಣಾ ಸಚಿವಾಲಯ ಹೇಳಿವೆ.

ಗುವಾಮ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ಸಿವಿಲ್ ಡಿಫೆನ್ಸ್ ಕಚೇರಿಗಳು ಉತ್ತರ ಕೊರಿಯಾದ ಉಡಾವಣೆಯ ವರದಿಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ. ಆದರೆ, ಸದ್ಯ ಪೆಸಿಫಿಕ್‌ನಲ್ಲಿನ ಪ್ರಮುಖ ಅಮೆರಿಕದ ಮಿಲಿಟರಿ ಕೇಂದ್ರವಾದ ಗುವಾಮ್‌ಗೆ ಯಾವುದೇ ಅಪಾಯ ಕಂಡು ಬಂದಿಲ್ಲ ಎಂದು ಅವು ಹೇಳಿವೆ.

ಬ್ಯಾಲಿಸ್ಟಿಕ್ ಕ್ಷಿಪಣಿಯ ಪ್ರಯೋಗ ನಡೆಸಿದ ಆರು ದಿನಗಳ ನಂತರ ಈಗ ಉತ್ತರ ಕೊರಿಯಾ ಮತ್ತೊಂದು ಉಡಾವಣೆ ಮಾಡಿದೆ.

ಸಾಂಕ್ರಾಮಿಕ ಸಂಬಂಧಿತ ತೊಡಕುಗಳ ಹೊರತಾಗಿಯೂ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಪ್ರಮುಖ ರಾಜಕೀಯ ಸಮಾವೇಶದಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಪ್ರತಿಜ್ಞೆ ಮಾಡಿದ ಕೆಲವು ದಿನಗಳ ನಂತರ ಆ ಪರೀಕ್ಷೆ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು