ಶುಕ್ರವಾರ, ಫೆಬ್ರವರಿ 3, 2023
18 °C

ಅಮೆರಿಕದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ: 7 ಮಂದಿ ಸಾವು, ಆರೋಪಿ ವಶಕ್ಕೆ

ಎಪಿ Updated:

ಅಕ್ಷರ ಗಾತ್ರ : | |

ಹಾಲ್ಫ್‌ ಮೂನ್‌ ಬೇ (ಅಮೆರಿಕ): ಅಮೆರಿಕದ ಎರಡು ಸ್ಥಳಗಳಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊದ ದಕ್ಷಿಣ ಕರಾವಳಿ ಭಾಗದಲ್ಲಿರುವ ಅಣಬೆ ಬೆಳೆಯುವ ಕೇಂದ್ರ ಹಾಗೂ ಟ್ರಕ್ ಕಂಪನಿವೊಂದರಲ್ಲಿ ದಾಳಿ ನಡೆದಿದೆ. ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಅಣಬೆ ಬೆಳೆಯುವ ಕೇಂದ್ರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಹಾಗೂ ಟ್ರಕ್‌ ಕಂಪನಿ ಬಳಿ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ’ ಎಂದು ಸ್ಯಾನ್‌ ಮ್ಯಾಟೊ ಕೌಂಟಿ ಬೋರ್ಡ್‌ ಆಫ್‌ ಸುಪರ್‌ವೈಜರ್ಸ್‌ ಮುಖ್ಯಸ್ಥ ದಾವೆ ಪೈನ್‌ ಮಾಹಿತಿ ನೀಡಿದರು.

‘ದಾಳಿ ಸಂಬಂಧ 67 ವರ್ಷದ ಚೌನ್ಲಿ ಖಾವೊ ಅವರನ್ನು ಬಂಧಿಸಲಾಗಿದೆ. ಅಣಬೆ ಬೆಳೆಯುವ ಕೇಂದ್ರ ಅಥವಾ ಟ್ರಕ್‌ ಕಂಪನಿಯಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ಅಂದಾಜಿಸಲಾಗಿದೆ’ ಎಂದ ಅವರು, ‘ಆತನೊಬ್ಬ ‘ಅತೃಪ್ತ ಕೆಲಸಗಾರ’ನಾಗಿದ್ದ’ ಎಂದರು.

ಸಾರ್ವಜನಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿ, ಜನರನ್ನು ಕೊಲ್ಲುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದ್ದು,  ಜನವರಿಯಲ್ಲಿ ನಡೆದ ಆರನೇ ಪ್ರಕರಣ ಇದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು