ಕಜಕಿಸ್ತಾನದ ಗಣಿಯಲ್ಲಿ ಮೀಥೇನ್ ಸ್ಫೋಟ, ಆರು ಸಾವು

ಅಲ್ಮಾಟಿ, ಕಜಕಿಸ್ತಾನ: ಕಜಕಿಸ್ತಾನದ ಅರ್ಸೆಲರ್ ಮಿತ್ತಲ್ ಗಣಿಯಲ್ಲಿ ಭಾನುವಾರ ಮೀಥೇನ್ ಸ್ಫೋಟ ಸಂಭವಿಸಿ ಆರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಕಂಪನಿ ಮತ್ತು ತುರ್ತು ಸಚಿವಾಲಯ ಹೇಳಿದೆ.
ಮಧ್ಯ ಏಷ್ಯಾ ದೇಶದ ಕೈಗಾರಿಕಾ ಕರಗಂಡ ಪ್ರದೇಶದಲ್ಲಿ ಉಕ್ಕಿನ ಕಜಕ್ ಘಕವಾದ ಅರ್ಸೆಲರ್ ಮಿತ್ತಲ್ ಟೆಮಿರ್ಟೌ ನಿರ್ವಹಿಸುತ್ತಿರುವ ಅಬೈಸ್ಕಯಾ ಕಲ್ಲಿದ್ದಲು ಗಣಿಯಲ್ಲಿ ಭಾನುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ.
‘ಸ್ಫೋಟ ಸಂಭವಿಸಿದಾಗ 64 ಮಂದಿ ಕಾರ್ಮಿಕರು ಗಣಿಯಲ್ಲಿದ್ದರು. 56 ಮಂದಿ ಪಾರಾಗಿದ್ದಾರೆ. ಆರು ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.