ಆಂಕರೇಜ್: ‘ಅಲಾಸ್ಕಾದ ಆಗ್ನೇಯ ಭಾಗದ ಪರ್ವತ ಪ್ರದೇಶದಲ್ಲಿ ವಿಮಾನವೊಂದು ಗುರುವಾರ ಪತನಗೊಂಡಿದ್ದು, ಇದರಲ್ಲಿ ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಹಾಲೆಂಡ್ ಅಮೆರಿಕ ಲೈನ್ ಹಡಗಿನ ಐವರು ಪ್ರಯಾಣಿಕರನ್ನು ‘ಡಿ ಹಾವಿಲ್‌ಲ್ಯಾಂಡ್ ಬಿವೇರ್’ ವಿಮಾನದ ಮೂಲಕ ಕೆಟ್ಚಿಕನ್‌ನ ಬಂದರು ನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಿಮಾನವು ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಯಾರೂ ಕೂಡ ಬದುಕ್ಕುಳಿದಿಲ್ಲ ಎಂದು ಅವರು ಹೇಳಿದರು.

ಅಮೆರಿಕದ ಕರಾವಳಿ ಪಡೆ, ಅರಣ್ಯ ಸೇವೆ ಸೇರಿದಂತೆ ಇತರೆ ಸಂಸ್ಥೆಗಳು ಶೋಧ ಕಾರ್ಯಾಚರಣೆ ನಡೆಸಿ, ವಿಮಾನದ ಅವಶೇಷಗಳು ಮತ್ತು ಮೃತದೇಹಗಳು ಪತ್ತೆ ಹಚ್ಚಿವೆ ಎಂದುಅಲಾಸ್ಕಾ ಸ್ಟೇಟ್ ಟ್ರೂಪರ್ಸ್ ಹೇಳಿಕೆಯಲ್ಲಿ ತಿಳಿಸಿದೆ.

‘ಈ ಅಪಘಾತದ ಕುರಿತು ತನಿಖೆ ನಡೆಸಲು ತಂಡವೊಂದನ್ನು ಕಳುಹಿಸಲಾಗಿದೆ’ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.