ಸೋಮವಾರ, ಅಕ್ಟೋಬರ್ 18, 2021
25 °C

ಧೂಮಪಾನದಿಂದ ಕೋವಿಡ್‌ ಸೋಂಕಿನ ತೀವ್ರತೆ, ಸಾವು ಹೆಚ್ಚಾಗುವ ಸಾಧ್ಯತೆ: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಧೂಮಪಾನದಿಂದಾಗಿ ಕೋವಿಡ್‌ ರೋಗಿಗಳಲ್ಲಿ ಸೋಂಕು ತೀವ್ರಗೊಳ್ಳುವ ಜೊತೆಗೆ, ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಬಹುತೇಕ ಅಧ್ಯಯನಗಳ ಪ್ರಕಾರ, ಕೋವಿಡ್‌ ಸೋಂಕು ಹೆಚ್ಚಾಗಲು ಧೂಮಪಾನ ಮುಖ್ಯ ಕಾರಣ. ಆದರೆ, ಇದುವರೆಗೆ ನಡೆದಿರುವ ವಿವಿಧ ಸಂಶೋಧನೆಗಳ ಪ್ರಕಾರ, ವಾಸ್ತವವಾಗಿ ಖಚಿತ ಕಾರಣವನ್ನು ಪತ್ತೆ ಮಾಡಲು ಆಗಿಲ್ಲ. ಜರ್ನಲ್‌ ಥೋರಾಕ್ಸ್‌ನಲ್ಲಿ ಪ್ರಕಟಿಸಲಾದ ನೂತನ ಅಧ್ಯಯನದ ಪ್ರಕಾರ, ಧೂಮಪಾನ ಮತ್ತು ಕೋವಿಡ್ ಕುರಿತ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ದೊರೆತ ಫಲಿತಾಂಶವು ಈ ಶಂಕೆಯನ್ನು ಬಲಪಡಿಸಿದೆ.

‘ನಮ್ಮ ಸಂಶೋಧನೆಯ ಫಲಿತಾಂಶವು ಕೋವಿಡ್‌ ಗಂಭೀರವಾಗಲು ಧೂಮಪಾನವೇ ಕಾರಣ ಎಂಬುದನ್ನು ಇನ್ನಷ್ಟು ಬಲಪಡಿಸಿದೆ. ಧೂಮಪಾನ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್‌ ಸಮಸ್ಯೆಗಳಿಗೂ ಕಾರಣವಾಗಲಿದೆ. ಧೂಮಪಾನಕ್ಕೆ ಅನ್ವಯಿಸಿ ಹೇಳಲಾದ ಈ ಅಂಶಗಳು ಸಮಾನವಾಗಿ ಕೋವಿಡ್‌ಗೂ ಅನ್ವಯವಾಗಲಿದೆ ಎನ್ನುತ್ತಾರೆ‘ ತಂಡದ ಮುಖ್ಯ ಸಂಶೋಧಕಿಯಾಗಿರುವ ಆಶ್ಲ್ಯೆ ಕ್ಲಿಫ್ಟ್‌.

‘ಹಾಗಾಗಿ ಸಿಗರೇಟ್ ಸೇದುವುದನ್ನು ತ್ಯಜಿಸಲು ಮತ್ತು ಧೂಮಪಾನವನ್ನು ಕೈಬಿಡಲು ಇದು ಉತ್ತಮ ಸಮಯ‘ ಎಂದು ಕ್ಲಿಫ್ಟ್ ಸಲಹೆ ನೀಡಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು