ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಾಜ್‌ ಪಾರ್ಲರ್ ಮೇಲೆ‌ ದಾಳಿ: ಜಾರ್ಜಿಯಾದ ನೂತನ ಕಾಯ್ದೆಗೆ ದೊಡ್ಡ ಸವಾಲು

Last Updated 21 ಮಾರ್ಚ್ 2021, 8:06 IST
ಅಕ್ಷರ ಗಾತ್ರ

ಅಟ್ಲಾಂಟಾ: ಮಸಾಜ್‌ ಪಾರ್ಲರ್ ಮೇಲೆ ನಡೆದ‌ ಗುಂಡಿನ ದಾಳಿ ಪ್ರಕರಣವು ಜಾರ್ಜಿಯಾದಲ್ಲಿ ಜಾರಿಗೆ ತಂದಿರುವ ನೂತನ ದ್ವೇಷ ಅಪರಾಧ ತಡೆ ಕಾಯ್ದೆಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಅಟ್ಲಾಂಟಾದ ಎರಡು ಮಸಾಜ್‌ ಪಾರ್ಲರ್‌ಗಳು ಮತ್ತು ಉಪನಗರಗಳಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಏಷ್ಯಾ ಮೂಲದ ಆರು ಮಂದಿ ಮಹಿಳೆಯರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಶ್ವೇತ ವರ್ಣೀಯ ವ್ಯಕ್ತಿಯ ವಿರುದ್ಧ ‍ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಾಗಾಗಿ ಈ ಪ್ರಕರಣವು ಜಾರ್ಜಿಯಾದ ದ್ವೇಷ ಅಪರಾಧ ತಡೆ ಕಾಯ್ದೆಗೆ ದೊಡ್ಡ ಸವಾಲಾಗಲಿದೆ.

‘ಜನಾಂಗೀಯ ದ್ವೇಷದಿಂದ ಈ ದಾಳಿಯನ್ನು ನಡೆಸಿಲ್ಲ. ಲೈಂಗಿಕ ಚಟಕ್ಕಾಗಿ ನಡೆದ ದಾಳಿ’ ಎಂದು ಆರೋಪಿ ರಾಬರ್ಟ್‌ ಅರೋನ್‌ ಲಾಂಗ್‌ ಹೇಳಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಏಷ್ಯಾ ಮೂಲದ ಅಮೆರಿಕನ್ನರು ಮೃತಪಟ್ಟಿದ್ದಾರೆ. ಹಾಗಾಗಿ ಇದನ್ನು ಜನಾಂಗೀಯ ದ್ವೇಷದಿಂದ ನಡೆಸಲಾದ ದಾಳಿ ಎಂದು ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿವೆ. ಕೋವಿಡ್‌ ಪಿಡುಗು ಆರಂಭವಾದ ಬಳಿಕ ಏಷ್ಯಾ ಮೂಲದ ಅಮೆರಿಕನ್ನರ ಮೇಲೆ ಹಲವು ದಾಳಿಗಳು ನಡೆದಿವೆ.

ವ್ಯಕ್ತಿಯ ವಿರುದ್ಧ ದ್ವೇಷ ಅಪರಾಧ ಸಾಬೀತಾದಲ್ಲಿ ಜಾರ್ಜಿಯಾದ ನೂತನ ಕಾಯ್ದೆಯಡಿ ಆತನಿಗೆ ಕೇವಲ ಶಿಕ್ಷೆ ಮಾತ್ರವಲ್ಲದೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಜನಾಂಗೀಯ, ವರ್ಣ, ಧರ್ಮ, ರಾಷ್ಟ್ರೀಯ ಮೂಲ, ಅಂಗವಿಕಲತೆ, ಲಿಂಗ ಭೇದ ಮತ್ತು ಲೈಂಗಿಕ ಸಂಬಂಧಕ್ಕಾಗಿ ನಡೆದ ಅಪರಾಧಗಳಿಗೆ ಜಾರ್ಜಿಯಾ ಕಾಯ್ದೆಯಡಿ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ.

ಆರೋಪಿಯ ವಿರುದ್ಧ ದ್ವೇಷ ಅಪರಾಧ ಸಾಬೀತಾದಲ್ಲಿ ಆತನಿಗೆ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆ ಮತ್ತು 5000 ಡಾಲರ್ (‌₹3.62 ಲಕ್ಷದವರೆಗೆ) ದಂಡ ವಿಧಿಸಲಾಗುವುದು.

ಅಮೆರಿಕದ ನ್ಯಾಯಾಂಗ ಇಲಾಖೆಯು ಆರೋಪಿ ರಾಬರ್ಟ್‌ ಲಾಂಗ್‌ ವಿರುದ್ಧ ದ್ವೇಷ ಅಪರಾಧಗಳಡಿ ಪ್ರಕರಣ ದಾಖಲಿಸಿದೆ. ಆದರೆ ಫೆಡರಲ್‌ ಅಧಿಕಾರಿಗಳಿಗೆ ಈ ಸಂಬಂಧ ಯಾವುದೇ ಪುರಾವೆಗಳು ಲಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT