ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣದ ಕಥನ ಕೇಂದ್ರಿತ ತಾಣಗಳ ಪ್ರೋತ್ಸಾಹಕ್ಕೆ ಚಿತ್ತ: ಜಯಸೂರ್ಯ

Last Updated 9 ಆಗಸ್ಟ್ 2022, 16:16 IST
ಅಕ್ಷರ ಗಾತ್ರ

ಕೊಲಂಬೊ: ಭಾರತೀಯ ಪ್ರವಾಸಿಗರಿಗಾಗಿ ರಾಮಾಯಣದ ಕಥನ ಕೇಂದ್ರಿತ ತಾಣಗಳನ್ನು ಪ್ರೋತ್ಸಾಹಿಸಲು ಶ್ರೀಲಂಕಾ ಗಮನಹರಿಸಲಿದೆ ಎಂದು ಶ್ರೀಲಂಕಾದ ನೂತನ ಪ್ರವಾಸೋದ್ಯಮ ರಾಯಭಾರಿ ಮತ್ತು ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಮಂಗಳವಾರ ಹೇಳಿದ್ದಾರೆ.

ಆರ್ಥಿಕ ಬಿಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಆರ್ಥಿಕ ಚೇತರಿಕೆಗಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಪ್ರಯತ್ನಿಸುತ್ತಿದೆ.

ಜಯಸೂರ್ಯ ಅವರು ಸೋಮವಾರ ಕೊಲಂಬೊದಲ್ಲಿ ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೇ ಅವರನ್ನು ಭೇಟಿಯಾದರು.

‘ಶ್ರೀಲಂಕಾದ ಪ್ರವಾಸೋದ್ಯಮದ ನೂತನ ರಾಯಭಾರಿ, ಕ್ರಿಕೆಟ್ ದಂತಕಥೆ ಜಯಸೂರ್ಯ ಅವರು ಇಂದು ಹೈಕಮಿಷನರ್ ಅವರನ್ನು ಭೇಟಿ ಮಾಡಿದರು. ಭಾರತ ಮತ್ತು ಶ್ರೀಲಂಕಾದ ಜನರ ನಡುವಿನ ಸಂಬಂಧವನ್ನು ಬಲಪಡಿಸುವ ಮತ್ತು ಆರ್ಥಿಕ ಚೇತರಿಕೆಯ ಸಾಧನವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮಾಡಿತ್ತು.

ಟ್ವೀಟ್‌ಗೆ ಪ್ರತಿಕ್ರಿಯಿಸಿದ ಜಯಸೂರ್ಯ, ಭೇಟಿಗೆ ಒಪ್ಪಿಕೊಂಡಿದ್ದಕ್ಕಾಗಿ ಭಾರತದ ಹೈಕಮಿಷನರ್‌ಗೆ ಧನ್ಯವಾದ ಅರ್ಪಿಸಿದ್ದರು.

‘ಭಾರತೀಯ ಪ್ರವಾಸಿಗರಿಗೆ ರಾಮಾಯಣದ ಜಾಡನ್ನು ಉತ್ತೇಜಿಸಲು ನಾವು ಗಮನಹರಿಸುತ್ತೇವೆ’ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ರಾಮಾಯಣದ ಪರಂಪರೆಯ ಆಧಾರದ ಮೇಲೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಉತ್ತೇಜಿಸಲು ಭಾರತ ಮತ್ತು ಶ್ರೀಲಂಕಾ 2008ರಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಶ್ರೀಲಂಕಾದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ 52 ಪಾರಂಪರಿಕ ತಾಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT