ಮಂಗಳವಾರ, ಸೆಪ್ಟೆಂಬರ್ 27, 2022
27 °C

ಅಧ್ಯಕ್ಷರ ನಿವಾಸದಲ್ಲಿ ಸಿಕ್ಕ ಹಣ ತಂದೊಪ್ಪಿಸಿ: ಪೊಲೀಸರಿಗೆ ಲಂಕಾ ನ್ಯಾಯಾಲಯ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಲಂಬೊ: ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ನಿವಾಸದಲ್ಲಿ ಪತ್ತೆಯಾಗಿದ್ದ 17.8 (1.78 ಶ್ರೀಲಂಕಾ ರೂಪಾಯಿ) ದಶಲಕ್ಷ ನಗದನ್ನು ತಕ್ಷಣವೇ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಜುಲೈ 9ರಂದು ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡಿದ್ದ ಪ್ರತಿಭಟನಾಕಾರರು ಅಲ್ಲಿ ಲಕ್ಷಾಂತರ ಹಣ ಪತ್ತೆ ಮಾಡಿರುವುದಾಗಿಯು, ಅವರು ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾಗಿಯೂ ವರದಿಯಾಗಿತ್ತು. ದಾಳಿಗೂ ಮೊದಲೇ ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು.

ಫೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹಣವನ್ನು ಹಾಜರುಪಡಿಸುವಂತೆ ಫೋರ್ಟ್‌ ಪೊಲೀಸ್ ಠಾಣೆ ಅಧಿಕಾರಿಗೆ ಸೂಚನೆ ನೀಡಿದೆ.

17.8 ದಶಲಕ್ಷ ರೂಪಾಯಿ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿ ಮೂರು ವಾರಗಳು ಕಳೆದರೂ ಹಣದ ಬಗ್ಗೆ ಯಾವುದೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದ ಕಾರಣ ಕೋರ್ಟ್‌ ಈ ಆದೇಶ ನೀಡಿದೆ. ಫೋರ್ಟ್ ಮ್ಯಾಜಿಸ್ಟ್ರೇಟ್ ತಿಳಿನಾ ಗಮಗೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ‘ಡೈಲಿ ಮಿರರ್’ ಪತ್ರಿಕೆ ವರದಿ ಮಾಡಿದೆ.

ವಶಪಡಿಸಿಕೊಂಡ ಹಣದ ಬಗ್ಗೆ ವರದಿ ಸಲ್ಲಿಸುವಂತೆ ಗಮಗೆ ಪೊಲೀಸರಿಗೆ ಸೂಚನೆಯನ್ನೂ ನೀಡಿದರು.

ಭಾರಿ ಪ್ರತಿಭಟನೆಗಳ ನಡುವೆ, ಅಧ್ಯಕ್ಷ ರಾಜಪಕ್ಸೆ ಜುಲೈ 13 ರಂದು ದೇಶದಿಂದ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು. ನಂತರ ಅವರು ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿಂದಲೇ ಅವರು ತಮ್ಮ ರಾಜೀನಾಮೆ ಪತ್ರವನ್ನು ಇಮೇಲ್ ಮಾಡಿದರು.

ಇದನ್ನೂ ಓದಿ : ಶ್ರೀಲಂಕಾ ಅಧ್ಯಕ್ಷ ಗೊಟಬಯ ನಿವಾಸದಲ್ಲಿ ಭಾರಿ ಹಣ ವಶಕ್ಕೆ ಪಡೆದ ಪ್ರತಿಭಟನಾಕಾರರು

ಏತನ್ಮಧ್ಯೆ, ಜುಲೈ 9 ರಂದು ಕಾನೂನುಬಾಹಿರವಾಗಿ ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸಿದ ಆರೋಪದಲ್ಲಿ ಬಂಧಿತರಾದ ನಾಲ್ವರು ಆರೋಪಿಗಳಿಗೆ ವೈಯಕ್ತಿಕ 5,00,000 ರೂಪಾಯಿ ಹಣದ ಬಾಂಡ್‌ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ.

2.2 ಕೋಟಿ ಜನರಿರುವ ಶ್ರೀಲಂಕಾವು ಭಾರೀ ಆರ್ಥಿಕ ಪ್ರಕ್ಷುಬ್ಧತೆಗೆ ಒಳಗಾಗಿದೆ. ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಸನ್ನಿವೇಶ ಎದುರಿಸುತ್ತಿರುವ ಲಂಕಾ ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ದುರ್ಬಲಗೊಂಡಿದೆ. ಹೀಗಾಗಿ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಲಭ್ಯತೆಗೆ ತೊಂದರೆಯಾಗಿದೆ.

ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಕಳವು: ಮೂವರ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು