ಶುಕ್ರವಾರ, ಜನವರಿ 21, 2022
30 °C

ಶ್ರೀಲಂಕಾದ ನೂತನ ಸಂವಿಧಾನದ ಕರಡು ಅಂತಿಮ- ವಿದೇಶಾಂಗ ಸಚಿವ ಜಿ.ಎಲ್‌.ಪೀರಿಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಶ್ರೀಲಂಕಾದ ನೂತನ ಸಂವಿಧಾನದ ಕರಡು ಪ್ರತಿ ಅಂತಿಮಗೊಂಡಿದ್ದು, 2022ರ ಆರಂಭದಲ್ಲಿ ಸಂಸತ್ತಿನ ಅನುಮೋದನೆ ಪಡೆಯಲು ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಜಿ.ಎಲ್‌.ಪೀರಿಸ್ ಮಂಗಳವಾರ ತಿಳಿಸಿದರು.

2019ರ ಅಧ್ಯಕ್ಷೀಯ ಚುನಾವಣೆಯ ಪ್ರಣಾಳಿಕೆಯಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ಭರವಸೆ ನೀಡಿದ್ದಂತೆ, ಕರಡು ಪ್ರತಿಯನ್ನು ರಚಿಸಲು ಅವರು ಪರಿಣತರ ಸಮಿತಿಯನ್ನು ರಚಿಸಿದ್ದರು ಎಂದು ಸಚಿವರು ತಿಳಿಸಿದರು. ಆದರೆ, ನೂತನ ಸಂವಿಧಾನದ ಸ್ವರೂಪವನ್ನು ಅವರು ವಿವರಿಸಲಿಲ್ಲ.

ನವೆಂಬರ್‌ ಎರಡನೇ ವಾರದಲ್ಲಿ 2022ರ ಬಜೆಟ್ ಕುರಿತ ಚರ್ಚೆ ಸಂಸತ್ತಿನ‌ಲ್ಲಿ ಆರಂಭವಾಗಲಿದ್ದು, ಡಿಸೆಂಬರ್‌ವರೆಗೆ ನಡೆಯಲಿದೆ. ಹೊಸ ಸಂವಿಧಾನ ರೂಪಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿತ್ತು. ಜನರ ಅಗತ್ಯಗಳು ಬದಲಾದಂತೆ, ಸಂವಿಧಾನವೂ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಸಂವಿಧಾನವನ್ನು ಬದಲಿಸುವುದಾಗಿ ಶ್ರೀಲಂಕಾ ಈ ಹಿಂದೆಯೂ ಅನೇಕ ಬಾರಿ ಹೇಳಿತ್ತು. 2017ರಿಂದ ಇಲ್ಲಿಯವರೆಗೆ ಸುದೀರ್ಘ ಚರ್ಚೆಯ ನಂತರವೂ ಇದು ಕಾರ್ಯಸಾಧುವಾಗಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು