ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್ ರೈಲು ಅಪಘಾತ: ಮೃತರ ಸಂಖ್ಯೆ 51ಕ್ಕೆ ಏರಿಕೆ

Last Updated 3 ಏಪ್ರಿಲ್ 2021, 6:09 IST
ಅಕ್ಷರ ಗಾತ್ರ

ಹುವಾಲಿಯೆನ್‌ ಕೌಂಟಿ (ತೈವಾನ್): ತೈವಾನ್‌ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 146 ಮಂದಿಗೆ ಗಾಯಗಳಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಟೊರೊಕೊ ಜಾರ್ಜ್‌ ಪ್ರದೇಶದಲ್ಲಿ ಶುಕ್ರವಾರ ರೈಲು ಸುರಂಗದಿಂದ ಹೊರ ಬರುತ್ತಿದ್ದಾಗ, ನಿರ್ಮಾಣ ಚಟುವಟಿಕೆಗಳಿಗೆ ನಿಯೋಜನೆಗೊಂಡಿದ್ದ ಲಾರಿಯೊಂದು ಸೇತುವೆಯಿಂದ ರೈಲ್ವೆ ಹಳಿಯ ಮೇಲೆ ಉರುಳಿತು. ಪರಿಣಾಮವಾಗಿ ರೈಲು ಹಳಿ ತಪ್ಪಿ ಅಪಘಾತಕ್ಕೀಡಾಯಿತು. ರೈಲಿನಲ್ಲಿ 494 ಪ್ರಯಾಣಿಕರಿದ್ದರು.

ಈ ಅಪಘಾತಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಲಾರಿ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಲಾರಿ ರೈಲು ಹಳಿ ಮೇಲೆ ಬಿದ್ದಾಗ, ಅದರೊಳಗೆ ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಲಾರಿ ಮಾಲೀಕನನ್ನು ಪ್ರಶ್ನೆಗೆ ಒಳಪಡಿಸಿದ್ದಾರೆ. ‘ಟ್ರಕ್‌ನ ತುರ್ತು ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ‘ ಎಂದು ಸರ್ಕಾರದ ವಿಪತ್ತು ಪರಿಹಾರ ಕೇಂದ್ರ ತಿಳಿಸಿದೆ.

ತೈವಾನ್ ಅಧ್ಯಕ್ಷ ತ್ಸಾಯ್‌ ಇಂಗ್–ವೆನ್ ಅವರು ಅಪಘಾತ ಸಂಭವಿಸಿರುವ ಸ್ಥಳಕ್ಕೆಶನಿವಾರ ಭೇಟಿ ನೀಡಲಿದ್ದಾರೆ.

ಅಪಘಾತ ಸಂಭವಿಸಿದ ರೈಲಿನ ಕೆಲವು ಬೋಗಿಗಳು ಸುರಂಗದಲ್ಲಿ ಸಿಲುಕಿದ್ದರಿಂದ, ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಇನ್ನೂ ಕೆಲವು ಪ್ರಯಾಣಿಕರು ರೈಲಿನ ಕಿಟಕಿಗಳನ್ನು ಮುರಿದು ಹೊರಗೆ ಜಿಗಿದು, ರೈಲಿನ ಚಾವಣಿ ಮೇಲೆ ಏರಿ ಸುರಕ್ಷಿತವಾಗಿ ಹೊರ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT