ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜ್‌ಶಿರ್‌ ಸಂಪೂರ್ಣ ವಶ: ತಾಲಿಬಾನ್‌

Last Updated 6 ಸೆಪ್ಟೆಂಬರ್ 2021, 5:21 IST
ಅಕ್ಷರ ಗಾತ್ರ

ಕಾಬೂಲ್‌: ಪಂಜ್‌ಶಿರ್‌ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಾಲಿಬಾನ್‌ ಹೇಳಿಕೊಂಡಿದೆ.

ಇದುವರೆಗೆ ಈ ಪ್ರಾಂತ್ಯವು ಅಫ್ಗಾನಿಸ್ತಾನದ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್‌ ಪಡೆಯ(ಎನ್‌ಆರ್‌ಎಫ್‌ಎ) ನಿಯಂತ್ರಣದಲ್ಲಿತ್ತು. ತಾಲಿಬಾನ್‌ ಮತ್ತು ಎನ್‌ಆರ್‌ಎಫ್‌ಎ ನಡುವೆ ಹಲವು ದಿನಗಳಿಂದ ಕದನ ನಡೆದಿತ್ತು.

‍ಪಂಜ್‌ಶಿರ್‌ ವಶಪಡಿಸಿಕೊಳ್ಳುವ ಮೂಲಕ ತಾಲಿಬಾನ್‌, ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿಂದೆ.

ಪಂಜ್‌ಶಿರ್‌ ಪ್ರಾಂತ್ಯದ ಗವರ್ನರ್‌ ಕಟ್ಟಡದ ಆವರಣದಲ್ಲಿ ತಾಲಿಬಾನಿಗಳು ನಿಂತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಕಾಲೇಜು ಯುವತಿಯರಿಗೆ ನಿಖಾಬ್‌ ಕಡ್ಡಾಯ: ತಾಲಿಬಾನ್ ಆದೇಶ

ಕಾಬೂಲ್‌ (ಎಎಫ್‌ಪಿ): ಅಫ್ಗಾನಿಸ್ತಾನದ ಖಾಸಗಿ ವಿಶ್ವವಿದ್ಯಾಲಯಗಳ ತರಗತಿಗಳಿಗೆ ಹಾಜರಾಗುವ ಯುವತಿಯರು/ಮಹಿಳೆಯರು, ಮುಖವನ್ನು ಮುಚ್ಚುವಂಥ ವಸ್ತ್ರವನ್ನು (ನಿಖಾಬ್‌) ಕಡ್ಡಾಯವಾಗಿ ಧರಿಸಬೇಕು ಎಂದು ತಾಲಿಬಾನ್‌ ಆದೇಶಿಸಿದೆ.

ಇದರೊಂದಿಗೆ, ಯುವಕ–ಯುವತಿಯರಿಗೆ ಪ್ರತ್ಯೇಕವಾಗಿ ಅಥವಾ ಅವರಿಬ್ಬರ ಮಧ್ಯದಲ್ಲಿ ಪರದೆಯನ್ನು ಅಳವಡಿಸಿ ತರಗತಿಗಳನ್ನು ನಡೆಸುವಂತೆ ಸೂಚಿಸಿದೆ.

ತಾಲಿಬಾನ್‌ನ ಶಿಕ್ಷಣ ವಿಭಾಗದ ಅಧಿಕಾರಿಗಳು ಈ ಬಗ್ಗೆ ಸುದೀರ್ಘವಾದ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಮಹಿಳೆಯರೇ ಪಾಠ ಮಾಡಬೇಕು. ಅದು ಸಾಧ್ಯವಾಗದೇ ಹೋದಲ್ಲಿ ಉತ್ತಮ ಚಾರಿತ್ರ್ಯದ ‘ವಯಸ್ಸಾದ ಪುರುಷರು’ ಪಾಠ ಮಾಡಬಹುದು ಎಂದು ಹೇಳಿದೆ. 2001ರಲ್ಲಿ ತಾಲಿಬಾನ್‌ ಆಡಳಿತ ಕೊನೆಗೊಳ್ಳುತ್ತಲೇ ದೇಶದಲ್ಲಿ ಸ್ಥಾಪನೆಯಾಗಿರುವ ಎಲ್ಲ ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಈ ಆದೇಶ ಅನ್ವಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT