ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಜೈಲಿನಲ್ಲಿ 8 ವರ್ಷಗಳ ಕಾಲ ಬಂಧನದಲ್ಲಿದ್ದೆ: ತಾಲಿಬಾನ್ ಅಧಿಕಾರಿ ರುಹಾನಿ

Last Updated 17 ಆಗಸ್ಟ್ 2021, 7:28 IST
ಅಕ್ಷರ ಗಾತ್ರ

ಕಾಬೂಲ್‌: ‘ಅಮೆರಿಕದ ಜೈಲಿನಲ್ಲಿ ತನ್ನನ್ನು 8 ವರ್ಷಗಳ ಕಾಲ ಇರಿಸಲಾಗಿತ್ತು’ ಎಂದು ತಾಲಿಬಾನ್‌ ಅಧಿಕಾರಿ ಗೋಲಾಂ ರುಹಾನಿ ಸೋಮವಾರ ತಿಳಿಸಿದರು.

ಕಾಬೂಲ್‌ನಲ್ಲಿರುವ ಅಫ್ಗಾನ್‌ ಅರಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರುಹಾನಿ, ‘ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯು. ಬುಷ್‌ ನೇತೃತ್ವದ ಸರ್ಕಾರವು ಅಫ್ಗಾನ್‌ ಕೈದಿಗಳನ್ನು ಬಿಡುಗಡೆಗೊಳಿಸುವ ಮುನ್ನ ತನ್ನನ್ನು 8 ವರ್ಷಗಳ ಕಾಲ ಬಂಧನದಲ್ಲಿ ಇಡಲಾಗಿತ್ತು’ ಎಂದರು.

2007ರಲ್ಲಿ ಬುಷ್‌ ಸರ್ಕಾರವು ಗ್ವಾಂಟನಾಮೊ ಜೈಲಿನಿಂದ 13 ಮಂದಿ ಅಫ್ಗಾನ್‌ ಕೈದಿಗಳು ಸೇರಿದಂತೆ 485 ಕೈದಿಗಳನ್ನು ಬಿಡುಗಡೆಗೊಳಿಸಿತ್ತು. ಈ ಕೈದಿಗಳ ಪೈಕಿ ಗೋಲಾಂ ರುಹಾನಿಯೂ ಒಬ್ಬರು.

ರುಹಾನಿ, ತಾನು ತಾಲಿಬಾನ್‌ ಸಂಘಟನೆಯ ಸದಸ್ಯ ಹಾಗೂ ಕಾಬೂಲ್‌ನಲ್ಲಿ ಗುಪ್ತಚರ ಸೇವೆಯಲ್ಲಿ ನಾಲ್ಕು ವರ್ಷಗಳ ಕಾಲ ತೊಡಗಿದ್ದೆ ಎಂದು ಅಮೆರಿಕದ ಸೇನೆ ಮುಂದೆ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರುಹಾನಿಯನ್ನು ಜನವರಿ2002ರಲ್ಲಿ ಗ್ವಾಂಟನಾಮೊ ಜೈಲಿಗೆ ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT