ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದ ಶೇ. 85 ರಷ್ಟು ಭೂಪ್ರದೇಶ ನಮ್ಮ ನಿಯಂತ್ರಣದಲ್ಲಿದೆ: ತಾಲಿಬಾನ್

Last Updated 9 ಜುಲೈ 2021, 13:41 IST
ಅಕ್ಷರ ಗಾತ್ರ

ಮಾಸ್ಕೊ: ಆಫ್ಗಾನಿಸ್ತಾನದಿಂದ ಅಮೆರಿಕದ ಪಡೆಗಳು ವಾಪಸ್ ಆದ ಬಳಿಕ ದೇಶದ ಶೇ. 85 ರಷ್ಟು ಪ್ರದೇಶವು ನಮ್ಮ ನಿಯಂತ್ರಣದಲ್ಲಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡನ್ ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ ಕೆಲವೇ ಗಂಟೆಗಳ ನಂತರ, ತಾಲಿಬಾನ್ ಗಡಿ ಪಟ್ಟಣವಾದ ಇಸ್ಲಾಂ ಖಾಲಾವನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದು, ಈ ಮೂಲಕ ಇರಾನಿನ ಗಡಿಯಿಂದ ಚೀನಾದೊಂದಿಗಿನ ಗಡಿವರೆಗೆ ಸಂಪೂರ್ಣ ಪ್ರದೇಶ ನಮ್ಮದಾಗಿದೆ ಎಂದು ಹೇಳಿಕೊಂಡಿದೆ.

ಮಾಸ್ಕೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ತಾಲಿಬಾನ್ ಸಮಾಲೋಚಕ ಶಹಾಬುದ್ದೀನ್ ಡೆಲವಾರ್, ‘ದೇಶದ 398 ಜಿಲ್ಲೆಗಳ ಪೈಕಿ 250 ಸೇರಿದಂತೆ.ಅಫ್ಗಾನಿಸ್ತಾನದ 85 ಪ್ರತಿಶತ ಪ್ರದೇಶ’ ನಮ್ಮ ಗುಂಪಿನ ನಿಯಂತ್ರಣದಲ್ಲಿದೆ ಎಂದಿದ್ದಾರೆ.

‘ಈ ಪ್ರದೇಶದಲ್ಲಿನ ಎಲ್ಲ ಆಡಳಿತ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ತಮ್ಮ ಕೆಲಸವನ್ನು ಮುಂದುವರಿಸುತ್ತವೆ. ನಾವು ಅವರ ಕಾರ್ಯವನ್ನು ಖಾತ್ರಿಪಡಿಸಿಕೊಂಡಿದ್ದೇವೆ’ ಎಂದು ಅವರು ಹೇಳಿದ್ಧಾರೆ. .

ಅಫ್ಘಾನಿಸ್ತಾನದ ಜನರನ್ನು ತಾಲಿಬಾನ್, ‘ಇಸ್ಲಾಂ ಧರ್ಮದ ತತ್ವ’ದ ಅಡಿಯಲ್ಲಿ ತಂದ ಪರಿಣಾಮ ಅಮೆರಿಕ ಸೇನೆಯ ವಾಪಸಾತಿ ಆಗಿದೆ ಎಂದಿರುವ ಡೆಲವಾರ್, ಒತ್ತಡಪೂರ್ವಕವಾಗಿ ಅಮೆರಿಕ ಸೇನೆಯನ್ನು ಅಲ್ಲಿಂದ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಆಡಳಿತ ಕೇಂದ್ರಗಳ ಮೇಲೆ ದಾಳಿ ಮಾಡದಂತೆ ತಾಲಿಬಾನಿಗೆ ಅಮೆರಿಕದೊಂದಿಗೆ ಯಾವುದೇ ಒಪ್ಪಂದವಿಲ್ಲ ಎಂದು ಅವರು ಹೇಳಿದ್ದಾರೆ.

ಸೇನೆ ಹಿಂತೆಗೆತದ ಬಗ್ಗೆ ಪ್ರತಿಕ್ರಿಯಿಸಿದ್ದ ಬೈಡನ್, ಅಫ್ಗಾನ್ ಜನರು ಮಾತ್ರ ತಮ್ಮ ಭವಿಷ್ಯವನ್ನು ನಿರ್ಧರಿಸಬೇಕು ಎಂದು ಹೇಳಿದ್ದರು. ಆದರೆ, ಅಲ್ಲಿನ ಮುಂಬರುವ ಅನಿಶ್ಚಿತತೆಯನ್ನು ಅವರು ಒಪ್ಪಿಕೊಂಡರು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಫ್ಗನ್ ಅಧ್ಯಕ್ಷ ಅಶ್ರಫ್ ಘನಿ, ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸಬಲ್ಲದು ಎಂದು ಹೇಳಿದ್ದಾರೆ. ಆದರೆ, ತೊಂದರೆಗಳು ಮುಂದಿದೆ ಎಂದು ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT