ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ, ನ್ಯಾಯಾಂಗದೊಂದಿಗೆ ಮಾತುಕತೆ ನಡೆಸದೆ ಪ್ರತಿಭಟಿಸುವಂತಿಲ್ಲ: ತಾಲಿಬಾನ್

Last Updated 9 ಸೆಪ್ಟೆಂಬರ್ 2021, 4:33 IST
ಅಕ್ಷರ ಗಾತ್ರ

ಕಾಬೂಲ್:‌ ಭದ್ರತೆ ಮತ್ತು ನ್ಯಾಯಾಂಗ ಇಲಾಖೆಗಳೊಂದಿಗೆ ಮಾತುಕತೆ ನಡೆಸದೆ ಅಫ್ಗಾನಿಸ್ತಾನದಲ್ಲಿ ಯಾವುದೇ ಪ್ರತಿಭಟನೆಗಳನ್ನು ನಡೆಸುವಂತಿಲ್ಲ ಎಂದು ತಾಲಿಬಾನ್‌ ಸರ್ಕಾರ ನಿರ್ದೇಶನ ನೀಡಿದೆ.

ಅಫ್ಗಾನಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ಪ್ರತಿಭಟನೆಗಳನ್ನು ನಡೆಸುವ24 ಗಂಟೆ ಮೊದಲು ಸಂಪೂರ್ಣ ವಿವರ ಸಲ್ಲಿಸಬೇಕು ಎನ್ನಲಾಗಿದೆ. ಹೊಸದಾಗಿ ರಚನೆಯಾಗಿರುವ ತಾಲಿಬಾನ್‌ ಸರ್ಕಾರದ ವಿರುದ್ಧ ದೇಶದಾದ್ಯಂತಪ್ರತಿಭಟನೆಗಳು ನಡೆದ ಬಳಿಕ ಸರ್ಕಾರ ಈ ಸೂಚನೆ ನೀಡಿದೆ.

ತಾಲಿಬಾನ್‌ ವಿರೋಧಿಹೋರಾಟವನ್ನು ಬೆಂಬಲಿಸಿ ಫೈಜಾಬಾದ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕಳೆದ ಎರಡು ದಶಕಗಳಲ್ಲಿ ಉಂಟಾಗಿದ್ದ ಪ್ರಗತಿಪರ ಬದಲಾವಣೆಗಳನ್ನು ಮರುಸ್ಥಾಪಿಸಬೇಕು ಮತ್ತು ಅಫ್ಗಾನಿಸ್ತಾನದ ಹೊಸ ಸರ್ಕಾರದಲ್ಲಿ ಮಹಿಳೆಯರಿಗೆಪ್ರಾತಿನಿಧ್ಯ ಸಿಗಬೇಕೆಂದು ಒತ್ತಾಯಿಸಿ ಮಹಿಳೆಯರ ಗುಂಪೊಂದು ಬಲ್ಖ್‌ ಪ್ರಾಂತ್ಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತ್ತು. ಕಾಬೂಲ್‌, ಬದಖ್‌ಶಾನ್ ಮತ್ತು ಪರ್ವಾನ್‌ ಪ್ರಾಂತ್ಯಗಳಲ್ಲಿಯೂ ಪ್ರತಿಭಟನೆಗಳು ನಡೆದಿದ್ದವು.

ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನದ ಆಡಳಿತ ತಾಲಿಬಾನ್‌ ಸಂಘಟನೆಯ ವಶವಾದ ಬಳಿಕ, ಆ ದೇಶದಲ್ಲಿ (ಅಫ್ಗಾನಿಸ್ತಾನದಲ್ಲಿ) ನಾಗರಿಕ ದಂಗೆ ಆರಂಭವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಅಫ್ಗಾನಿಸ್ತಾನದಲ್ಲಿನ ಮಾನವ ಹಕ್ಕುಗಳ ಸ್ಥಿತಿಯ ಬಗ್ಗೆ ವಿಶ್ವ ಸಮುದಾಯವೂ ಕಳವಳ ವ್ಯಕ್ತಪಡಿಸಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು,ಅಫ್ಗಾನ್‌ನಲ್ಲಿ ಮಹಿಳೆಯರನ್ನು ಒಳಗೊಂಡಂತೆ ನಾಗರಿಕರನ್ನು ನಡೆಸಿಕೊಳ್ಳುವ ರೀತಿಯನ್ನು ಆಧರಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಾಲಿಬಾನ್‌ಗೆ ಎಚ್ಚರಿಕೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT