ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಭಾರತೀಯ ಅಕ್ರಮ ವಲಸಿಗರ ಸಂಖ್ಯೆ ಏರಿಕೆ

Last Updated 12 ಮಾರ್ಚ್ 2023, 14:27 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಇಂಗ್ಲಿಷ್‌ ಕಾಲುವೆ ಮೂಲಕ ಬ್ರಿಟನ್‌ಗೆ ಅಕ್ರಮವಾಗಿ ನುಸುಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ವರ್ಷ 683 ಮಂದಿ ಸಣ್ಣ ಬೋಟುಗಳ ಮೂಲಕ ಬ್ರಿಟನ್‌ಗೆ ಅಕ್ರಮವಾಗಿ ನುಸುಳಿದ್ದಾರೆ. ಇದರಲ್ಲಿ ಹೆಚ್ಚಿನವರು ಭಾರತೀಯರು.

ಅಕ್ರಮ ವಲಸಿಗರ ಅಂಕಿ ಅಂಶಗಳನ್ನು ಬ್ರಿಟನ್‌ನ ಗೃಹ ಕಚೇರಿ ಬಿಡುಗಡೆ ಮಾಡಿದ್ದು, ಭಾರತದಿಂದ ಬ್ರಿಟನ್‌ಗೆ ಅಕ್ರಮವಾಗಿ ಹೋಗಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2018 ಮತ್ತು 2019ರಲ್ಲಿ ಒಬ್ಬರೂ ಅಕ್ರಮವಾಗಿ ಬ್ರಿಟನ್‌ಗೆ ಹೋಗಿರಲಿಲ್ಲ. ಆದರೆ, 2020ರಲ್ಲಿ 64 ಮಂದಿ, 2021ರಲ್ಲಿ 67 ಮಂದಿ ಅಕ್ರಮವಾಗಿ ಬ್ರಿಟನ್‌ಗೆ ಪ್ರವೇಶಿಸಿದ್ದಾರೆ.

ಅಕ್ರಮ ವಲಸಿಗರ ಪಟ್ಟಿಯಲ್ಲಿ ‘ಸಮರ್ಪಕ ದಾಖಲಾತಿ ಇಲ್ಲದೆ ವಿಮಾನಗಳ ಮೂಲಕ ಬಂದ ವಲಸಿಗರ’ ವಿಭಾಗದಲ್ಲಿ 400 ಭಾರತೀಯರು ಇದ್ದಾರೆ ಎಂದೂ ಅಂಕಿ ಅಂಶಗಳು ಹೇಳಿವೆ.

‘ಸ್ಟಾಪ್‌ ದಿ ಬೋಟ್ಸ್‌’ (ಬೋಟುಗಳನ್ನು ನಿಲ್ಲಿಸಿ) ಅಥವಾ ‘ಅಕ್ರಮ ವಲಸಿಗರ’ ಮಸೂದೆಯನ್ನು ಪ್ರಧಾನಿ ರಿಷಿ ಸುನಕ್‌ ಅವರು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿದ್ದರು. ಜೊತೆಗೆ, ಮಾನವ ಕಳ್ಳಸಾಗಣೆ ಮಾಡುವವರು ಫ್ರಾನ್ಸ್‌ನ ಬಂದರುಗಳ ಮೂಲಕ ಸಣ್ಣ ಬೋಟುಗಳಲ್ಲಿ ವಲಸಿಗರನ್ನು ಬ್ರಿಟನ್‌ಗೆ ತಂದುಬಿಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದು ನೆರೆಯ ಫ್ರಾನ್ಸ್‌ನೊಂದಿಗೆ ಬ್ರಿಟನ್‌ ಪರಿಷ್ಕೃತ ಒಪ್ಪಂದವನ್ನು ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT