ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ 'ಸಿನೊವ್ಯಾಕ್' ಕೋವಿಡ್‌ ಲಸಿಕೆ ಮಾನ್ಯ ಮಾಡಿದ ಡಬ್ಲ್ಯುಎಚ್‌ಒ

Last Updated 1 ಜೂನ್ 2021, 16:50 IST
ಅಕ್ಷರ ಗಾತ್ರ

ಜಿನೀವಾ: ಚೀನಾದ 'ಸಿನೊವ್ಯಾಕ್' ಕೋವಿಡ್‌–19 ಲಸಿಕೆ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಮಂಗಳವಾರ ಅನುಮೋದನೆ ನೀಡಿದೆ.

'ತುರ್ತು ಪರಿಸ್ಥಿತಿಯಲ್ಲಿ ಸಿನೊವ್ಯಾಕ್‌–ಕೊರೊನಾವ್ಯಾಕ್‌ ಕೋವಿಡ್‌–19 ಲಸಿಕೆ ಬಳಕೆ ಮಾಡಲು ಡಬ್ಲ್ಯುಎಚ್‌ಒ ಮಾನ್ಯಮಾಡಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಸಿನೊವ್ಯಾಕ್‌ ಲಸಿಕೆ ಬಳಕೆಯಲ್ಲಿದೆ. ಲಸಿಕೆಯ ಪ್ರಭಾವ, ಸುರಕ್ಷತೆ ಮತ್ತು ತಯಾರಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. 18 ವರ್ಷ ಮತ್ತು ಮೇಲ್ಪಟ್ಟವರು ಈ ಲಸಿಕೆ ಹಾಕಿಸಿಕೊಳ್ಳಲು ಶಿಫಾರಸು ಮಾಡಲಾಗಿದ್ದು, ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡು 2ರಿಂದ ನಾಲ್ಕು ವಾರಗಳ ಅಂತರದಲ್ಲಿ ಎರಡನೇ ಡೋಸ್‌ ಹಾಕಿಸಿಕೊಳ್ಳುವಂತೆ ಡಬ್ಲ್ಯುಎಚ್‌ಒ ಹೇಳಿದೆ.

ಕಳೆದ ತಿಂಗಳು ಚೀನಾದ ಸಿನೊಫಾರ್ಮ್‌ ಲಸಿಕೆಯನ್ನು ಡಬ್ಲ್ಯುಎಚ್‌ಒ ಮಾನ್ಯ ಮಾಡಿತ್ತು. ಚೀನಾ, ಚಿಲಿ, ಬ್ರೆಜಿಲ್‌, ಇಂಡೊನೇಷ್ಯಾ, ಮೆಕ್ಸಿಕೊ, ಥಾಯ್ಲೆಂಡ್‌ ಹಾಗೂ ಟರ್ಕಿ ಸೇರಿದಂತೆ 22 ರಾಷ್ಟ್ರಗಳಲ್ಲಿ ಸಿನೊವ್ಯಾಕ್‌ ಲಸಿಕೆ ಬಳಕೆಯಲ್ಲಿದೆ.

ಫೈಝರ್/ ಬಯೋಎನ್‌ಟೆಕ್‌, ಮಾಡರ್ನಾ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಹಾಗೂ ಆಸ್ಟ್ರಾಜೆನಿಕಾದ ಅಭಿವೃದ್ಧಿ ಪಡಿಸಿರುವ ಲಸಿಕೆಗಳನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಡಬ್ಲ್ಯುಎಚ್‌ಒ ಈಗಾಗಲೇ ಅನುಮೋದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT