ಭಾನುವಾರ, ಜುಲೈ 3, 2022
24 °C

ಮ್ಯಾನ್ಮಾರ್‌ನಲ್ಲಿ ಬೃಹತ್‌ ಪ್ರತಿಭಟನೆ: ಮಿಲಿಟರಿ ಆಡಳಿತಕ್ಕೆ ನಾಗರಿಕರ ಆಕ್ರೋಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೋನ್‌: ಸೇನಾ ಆಡಳಿತ ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಭಾನುವಾರ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

‘ಮ್ಯಾನ್ಮಾರ್‌ಗೆ ನ್ಯಾಯ ಒದಗಿಸಬೇಕು’ ಮತ್ತು ‘ಮಿಲಿಟರಿ ಸರ್ವಾಧಿಕಾರ ನಮಗೆ ಬೇಡ’ ಎನ್ನುವ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಆಂಗ್‌ ಸಾನ್‌ ಸೂಕಿ ನೇತೃತ್ವದ ನ್ಯಾಷನಲ್‌ ಲೀಗ್‌ ಆಫ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಧ್ವಜಗಳನ್ನು ಪ್ರದರ್ಶಿಸಿದರು.

ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ಜನರು ಒಗ್ಗೂಡದಂತೆ ಸೇನಾ ಆಡಳಿತ ಇಂಟರ್‌ನೆಟ್‌ ಸ್ಥಗಿತಗೊಳಿಸಿತ್ತು. ಆದರೂ, ನಿರೀಕ್ಷೆಗೂ ಮೀರಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಓದಿ: 

‘ದೇಶದ ಅತ್ಯುನ್ನತ ನಾಯಕಿ ಆಂಗ್‌ ಸಾನ್‌ ಸೂಕಿ ಬಿಡುಗಡೆಯಾಗುವವರೆಗೂ ಪ್ರತಿ ದಿನವೂ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು 20 ವರ್ಷದ ವಿದ್ಯಾರ್ಥಿ ಕಿ ಫ್ಯಾಯು ಕ್ಯಾವ್‌ ಎನ್ನುವವರು ಹೇಳಿದರು.

‘ಮುಂದಿನ ಪೀಳಿಗೆಗಾದರೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಮಿಲಿಟರಿ ಸರ್ವಾಧಿಕಾರಿ ಆಡಳಿತವನ್ನು ನಾವು ಅಂತ್ಯಗೊಳಿಸುತ್ತೇವೆ’ ಎಂದು 18 ವರ್ಷದ ಇನ್ನೊಬ್ಬ ವಿದ್ಯಾರ್ಥಿ ಯೆ ಕ್ಯಾವ್‌ ಹೇಳಿದರು.

ಓದಿ: 

ಪೊಲೀಸರು ಯಾಂಗೋನ್‌ ನಗರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ನಗರದ ಹೃದಯ ಭಾಗಕ್ಕೆ ತೆರಳುತ್ತಿದ್ದ ಪ್ರತಿಭಟನಕಾರರನ್ನು ಸಹ ತಡೆದರು.

 ಶನಿವಾರವೂ ಸಾವಿರಾರು ಮಂದಿ ಮ್ಯಾನ್ಮಾರ್‌ನ ಪ್ರಮುಖ ನಗರಗಳಲ್ಲಿ ಬೃಹತ್‌ ಪ್ರತಿಭಟನೆಗಳು ನಡೆದಿದ್ದವು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು