ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಕುಟುಂಬದ ನಾಲ್ವರ ಸದಸ್ಯರ ಹತ್ಯೆಯು ದ್ವೇಷ ಅಪರಾಧ– ಕೆನಡಾ ಪ್ರಧಾನಿ

Last Updated 9 ಜೂನ್ 2021, 5:51 IST
ಅಕ್ಷರ ಗಾತ್ರ

ಟೊರಾಂಟೊ: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ ಕುಟುಂಬದ ನಾಲ್ವರು ಸದಸ್ಯರ ಮೇಲೆ ಪಿಕ್‌–ಟ್ರಪ್‌ ಟ್ರಕ್‌ ಹರಿಸಿ ಹತ್ಯೆಗೈದಿರುವ ಪ್ರಕರಣಕ್ಕೆ ನಾಗರಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ಇದನ್ನು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸಿದ ದ್ವೇಷ ಅಪರಾಧ ಎಂದು ಕರೆದಿದ್ದಾರೆ.

ದಂಪತಿ, ಇಬ್ಬರು ಮಕ್ಕಳು ಮತ್ತು ಅಜ್ಜಿಯೊಂದಿಗೆ ಒಂಟಾರಿಯೊದ ಲಂಡನ್‌ನಲ್ಲಿ ಸಂಜೆ ವಾಯು ವಿಹಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕುಟುಂಬದ ಮೇಲೆ ಪಿಕ್‌–ಟ್ರಕ್‌ ಹರಿಸಿದ್ದಾನೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಸ್ಟಿನ್ ಟ್ರುಡೊ ಅವರು, ‘ಇದು ಭಯೋತ್ಪಾದನಾ ದಾಳಿಯಾಗಿದೆ. ನಮ್ಮ ಸಮುದಾಯದ ಮೇಲಿನ ದ್ವೇಷದಿಂದ ಈ ಹತ್ಯೆಯನ್ನು ಮಾಡಲಾಗಿದೆ. ದೇಶದಲ್ಲಿ ಜನಾಂಗೀಯ ತಾರತಮ್ಯ ಮತ್ತು ದ್ವೇಷ ಇಲ್ಲ ಎಂದು ಹಲವು ಭಾವಿಸಿದ್ದಾರೆ. ಈ ರೀತಿಯ ಘಟನೆ ನಡೆದಾಗ ಇಸ್ಲಾಮೋಫೋಬಿಯಾ ಕೆನಡಾದಲ್ಲಿ ಇಲ್ಲ ಎಂದು ಹೇಗೆ ಹೇಳಲು ಸಾಧ್ಯ?’ ಎಂದು ಅವರು ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ.

ಈ ಕುಟುಂಬವು ಕಳೆದ 14 ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿತ್ತು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT