ಟೊರೆಂಟೊ: ಕೆನಡಾದ ಸಂಸತ್ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷ ಜಯಶಾಲಿಯಾಗಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಾದ ಬಹುಮತವನ್ನು ಪಡೆಯವಲ್ಲಿ ವಿಫಲವಾಗಿದೆ.

ಟ್ರುಡೊ ಅವರ ಲಿಬರಲ್ ಪಕ್ಷ 156 ಸ್ಥಾನಗಳಲ್ಲಿ ಆಯ್ಕೆಯಾಗಿದೆ ಅಥವಾ ಮುನ್ನಡೆ ಸಾಧಿಸಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಈ ಬಾರಿಗಿಂತ ಒಂದು ಸ್ಥಾನ ಕಡಿಮೆ ಪಡೆದಿತ್ತು. ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಸಾಬೀತಿಗೆ 170 ಸ್ಥಾನಗಳ ಅಗತ್ಯವಿದ್ದು, ಸದ್ಯ ಲಿಬರಲ್ ಪಕ್ಷಕ್ಕೆ 14 ಸ್ಥಾನಗಳ ಕೊರತೆ ಇದೆ.

ಕನ್ಸರ್ವೇಟಿವ್ ಪಕ್ಷದವರು 121 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಅಥವಾ ಗೆದ್ದಿದ್ದಾರೆ. ಈ ಪಕ್ಷ ಕೂಡ 2019ರ ಚುನಾವಣೆಯಲ್ಲಿ ಇಷ್ಟೇ ಸ್ಥಾನಗಳನ್ನು ಪಡೆದಿತ್ತು. ಎಡಪಂಥೀಯ ನ್ಯೂ ಡೆಮಾಕ್ರೆಟ್ ಪಕ್ಷ 27 ಕ್ಷೇತ್ರಗಳಲ್ಲಿ ಮುನ್ನಡೆ ಅಥವಾ ಚುನಾಯಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.