ಬುಧವಾರ, ಡಿಸೆಂಬರ್ 8, 2021
28 °C

9/11 ಸ್ಮರಣಾ ಕಾರ್ಯಕ್ರಮದಲ್ಲಿ ಟ್ರಂಪ್, ಬೈಡನ್ ಭಾಗಿ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದಿದ್ದ 9/11ರ ಉಗ್ರರ ದಾಳಿ ಪ್ರಕರಣದ 19ನೇ ವರ್ಷದ ಸ್ಮರಣಾ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡನ್ ಇಬ್ಬರೂ ಭಾಗವಹಿಸಲಿದ್ದಾರೆ.

ಈ ಮುಖಂಡರು ಭಾಗವಹಿಸುವುದನ್ನು ಶ್ವೇತಭವನದ ಸಿಬ್ಬಂದಿ ಮತ್ತು ಬೈಡನ್ ಅವರ ಪ್ರಚಾರ ಉಸ್ತುವಾರಿ ಖಚಿತಪಡಿಸಿದ್ದಾರೆ. 2001ರ ಸೆಪ್ಟೆಂಬರ್ 11ರಂದು ಅಪಹರಿಸಲಾಗಿದ್ದ ನಾಲ್ಕು ವಿಮಾನಗಳನ್ನು ಬಳಸಿ ಭಯೋತ್ಪಾದಕರು ದಾಳಿ ನಡೆಸಿದ್ದರು.

ಪೆನ್ಸಿಲ್ವೇನಿಯಾದ ಗ್ರಾಮೀಣ ಪ್ರದೇಶ ಶಾಂಕ್ಸ್ ವಿಲೆಯಲ್ಲಿರುವ ಸ್ಮಾರಕಕ್ಕೆ ಉಭಯ ಮುಖಂಡರು ಬಹುತೇಕ ಒಬ್ಬರ ನಿರ್ಗಮನದ ನಂತರ ಮತ್ತೊಬ್ಬರು ಭೇಟಿ ನೀಡಬಹುದು ಎಂದು ಹೇಳಲಾಗಿದೆ.

ವಾರ್ಷಿಕ ಸ್ಮರಣಾ ಕಾರ್ಯಕ್ರಮದ ಸಹ ಆಯೋಜಕ ಸಂಸ್ಥೆ ನ್ಯಾಷನಲ್ ಪಾರ್ಕ್ ಸರ್ವೀಸ್, ಕಾರ್ಯಕ್ರಮ ಬೆಳಿಗ್ಗೆ 9.45ಕ್ಕೆ ಆರಂಭವಾಗಲಿದ್ದು, ಮುಖ್ಯ ಭಾಷಣ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ವಿಮಾನಗಳಲ್ಲಿದ್ದ ನತದೃಷ್ಟ ಪ್ರಯಾಣಿಕರು ಮತ್ತು ಸಿಬ್ಬಂದಿಯ ಹೆಸರುಗಳನ್ನು ಸ್ಮರಣಾ ಗಂಟೆಯ ನಾದದೊಂದಿಗೆ ಎತ್ತರಿಸಿದ ಧ್ವನಿಯಲ್ಲಿ ಉಚ್ಚರಿಸಲಾಗುತ್ತದೆ ಎಂದೂ ಏಜೆನ್ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಶ್ವೇತಭವನದ ವಕ್ತಾರರಾದ ಜ್ಯೂಡ್ ಡೀರೆ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ನಿ ಸಮೇತರಾಗಿ ಸ್ಥಳಕ್ಕೆ ಭೇಟಿ ನೀಡುವರು. ಟ್ರಂಪ್ ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆಯೇ ಎಂಬದನ್ನು ಶ್ವೇತಭವನ ಮತ್ತು ಏಜೆನ್ಸಿ ಖಚಿತಪಡಿಸಿಲ್ಲ.

ಪೆನ್ಸಿಲ್ವೇನಿಯಾದಲ್ಲಿ 9/11ರಂದು ಅಪಹೃತ ವಿಮಾನ ಬಿದ್ದು 40 ಪ್ರಯಾಣಿಕರು ಸತ್ತಿದ್ದ ಸ್ಥಳದಲ್ಲಿ ಸುಮಾರು 2,200 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಸ್ಮಾರಕ ರೂಪಿಸಲಾಗಿದೆ. ಅದೇ ದಿನ ಇತರೆ ಎರಡು ಅಪಹೃತ ವಿಮಾನಗಳನ್ನು ನ್ಯೂಯಾರ್ಕ್‌ನಲ್ಲಿನ ವರ್ಲ್ಡ್ ಟ್ರೇಡ್ ಸೆಂಟರ್ ಜೋಡಿ ಕಟ್ಟಡಗಳಿಗೆ ಗುದ್ದಿಸಿ ದಾಳಿ ನಡೆಸಲಾಗಿತ್ತು. ಈ ಕೃತ್ಯದಲ್ಲಿ ಸುಮಾರು 3,000 ಜನ ಸತ್ತಿದ್ದರು. ಇನ್ನೊಂದು ವಿಮಾನವನ್ನು ಪೆಂಟಗಾನ್ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. 

2016ರಲ್ಲಿ ಟ್ರಂಪ್ ಮತ್ತು ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಇಬ್ಬರೂ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಮಾರಕ ಸ್ಥಳದಲ್ಲಿ ಕೆಲಹೊತ್ತು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು