ಶನಿವಾರ, ಜನವರಿ 23, 2021
19 °C
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಧ್ಯಕ್ಷ ಹುದ್ದೆಗಾಗಿ ಎಂಥ ಹೋರಾಟಕ್ಕೂ ಸಿದ್ಧ: ಟ್ರಂಪ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಡಾಲ್ಟನ್‌ (ಅಮೆರಿಕ): ಚುನಾವಣೆಯ ಸೋಲಿನಿಂದಾಗಿ ಹತಾಶೆಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಧ್ಯಕ್ಷ ಹುದ್ದೆ ಉಳಿಸಿಕೊಳ್ಳಲು ಎಂಥ ಹೋರಾಟಕ್ಕೂ ಸಿದ್ಧ‘ ಎಂದು ಘೋಷಿಸಿದ್ದಾರೆ.

ಜಾರ್ಜಿಯಾದಲ್ಲಿ ಸೋಮವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಈ ವಾರದಲ್ಲಿ ಎಲೆಕ್ಟ್ರಾಲ್ ಕಾಲೇಜ್‌ ಮತಗಳನ್ನು ದೃಢೀಕರಿಸಲು ಸಭೆ ಸೇರಿದಾಗ, ಜೋಡನ್‌ ಅವರಿಂದ ಚುನಾವಣಾ ನಷ್ಟವನ್ನು ತುಂಬಿಕೊಂಡುವಂತೆ ಒತ್ತಾಯಿಸಬೇಕು‘ ಎಂದು ರಿಪಬ್ಲಿಕನ್ ಸಂಸದರಿಗೆ ಟ್ರಂಪ್ ಮನವಿ ಮಾಡಿದ್ದಾರೆ.

‘ಈ ಪ್ರವಾಸ, ಸೆನೆಟ್‌ಗೆ ಸ್ಪರ್ಧಿಸುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಉತ್ತೇಜಿಸುವುದಕ್ಕಾಗಿ‘ ಎಂದು ಈ ಮೊದಲು ಟ್ರಂಪ್ ಘೋಷಿಸಿದ್ದರು. ಆದರೆ, ಇಡೀ ಚುನಾವಣಾ ರ‍್ಯಾಲಿಯ ಉದ್ದಕ್ಕೂ ಅವರು ಚುನಾವಣೆಯಲ್ಲಿ ಸೋತಿರುವ ವಿಚಾರವನ್ನೇ ಪ್ರಸ್ತಾಪಿಸುತ್ತಾ, ಸೋಲಿಗೆ ಕಾರಣರಾದವರನ್ನು ಕಟುವಾಗಿ ಟೀಕಿಸುವುದಕ್ಕಾಗಿ ಮೀಸಲಿಟ್ಟರು.

ಇದಕ್ಕೂ ಮೊದಲು ವಾಷಿಂಗ್ಟನ್‌ನಲ್ಲಿ ಟ್ರಂಪ್, ರಿಪಬ್ಲಿಕನ್ ಪಕ್ಷದ ಸಂಸದರಿಗೆ ಬುಧವಾರ ನಡೆಯುವ ಕಾಂಗ್ರೆಸ್ಸಿನ ಜಂಟಿ ಅಧಿವೇಶನದಲ್ಲಿ ಬೈಡನ್ ಗೆಲುವನ್ನು ಔಪಚಾರಿಕವಾಗಿ ಆಕ್ಷೇಪಿಸುವಂತೆ ಒತ್ತಾಯಿಸಿದರು. ಈ ಜಂಟಿ ಅಧಿವೇಶನದಲ್ಲಿ ಎಲೆಕ್ಟ್ರಾಲ್ ಕಾಲೇಜ್‌ ಮತಗಳ ಎಣಿಕೆಯ ಮೂಲಕ ಬೈಡನ್ ಗೆಲುವನ್ನು ದೃಢೀಕರಿಸಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು