ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆ ನಡುವೆಯೂ ಕಾರಿನಲ್ಲಿ ಬಂದು ಅಭಿಮಾನಿಗಳಿಗೆ ಕೈ ಬೀಸಿದ ಟ್ರಂಪ್‌

Last Updated 5 ಅಕ್ಟೋಬರ್ 2020, 2:54 IST
ಅಕ್ಷರ ಗಾತ್ರ
ADVERTISEMENT
""
""
""

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಾವು ಚಿಕಿತ್ಸೆ ಪಡೆಯುತ್ತಿರುವ ಮಿಲಿಟರಿ ಆಸ್ಪತ್ರೆಯ ಹೊರಗೆ ಸೇರಿದ್ದ ಅಭಿಮಾನಿಗಳಿಗೆ ಕಾಣಿಸಿಕೊಂಡು, ಕೈ ಬೀಸಿದ್ದಾರೆ. ಅದಕ್ಕಾಗಿ ಅವರು ಕಾರಿನಲ್ಲಿ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.

‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್’ ಮತ್ತು ‘ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್’ ಅನ್ನು ಪ್ರತ್ಯೇಕಿಸುವ ವಾಷಿಂಗ್ಟನ್ ಡಿಸಿಯ ಮೇರಿಲ್ಯಾಂಡ್ ಉಪನಗರವಾದ ಬೆಥೆಸ್ಡಾಕ್ಕೆ ಕಾರಿನಲ್ಲಿ ಆಗಮಿಸಿದ ಡೊನಾಲ್ಡ್‌ ಟ್ರಂಪ್‌ ಅಭಿಮಾನಿಗಳತ್ತ ಕೈ ಬೀಸಿದರು. ತಮ್ಮ ನೆಚ್ಚಿನ ನಾಯಕನ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದ ಅಭಿಮಾನಿಗಳಿಗೆ ಟ್ರಂಪ್‌ ಅವರ ಈ ನಡೆ ಹೊಸ ಚೈತನ್ಯ ನೀಡಿತು.

ಇದಾದ ಮರುಗಳಿಗೆಯಲ್ಲೇ ಟ್ವೀಟ್‌ ಮಾಡಿದ ಡೊನಾಲ್ಡ್ ಟ್ರಂಪ್‌, ‘ಆಸ್ಪತ್ರೆಯ ಹೊರಗಿನ ಎಲ್ಲಾ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಿಜವೆಂದರೆ, ಅವರು ನಮ್ಮ ದೇಶವನ್ನು ಪ್ರೀತಿಸುತ್ತಾರೆ ಮತ್ತು ದೇಶವನ್ನು ಹಿಂದೆಂದಿಗಿಂತೂ ಎತ್ತರಕ್ಕೆ ನಾವು ಹೇಗೆ ಕೊಂಡೊಯ್ಯುತ್ತಿದ್ದೇವೆ ಎಂಬುದನ್ನು ಅವರು ಗಮನಿಸುತ್ತಿದ್ದಾರೆ,’ ಎಂದು ಹೇಳಿದ್ದಾರೆ.

ಟ್ರಂಪ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಹೊರಗಿನ ಜನಸಂದಣಿ ಪ್ರತಿ ದಿನವೂ ಹೆಚ್ಚುತ್ತಿದೆ. ಅಧ್ಯಕ್ಷ ಮತ್ತು ಕುಟುಂಬಕ್ಕೆ ಬೆಂಬಲವಾಗಿ ಆಸ್ಪತ್ರೆಯ ಹೊರಗೆ ಜನ ಸೇರುತ್ತಿದ್ದಾರೆ.

ಟ್ರಂಪ್ ದಂಪತಿಗೆ ಕೋವಿಡ್‌ ಇರುವುದು ಗುರುವಾರ ರಾತ್ರಿ ದೃಢಪಟ್ಟಿತ್ತು. ಇದೇ ಹಿನ್ನೆಲೆಯಲ್ಲಿ ಅವರನ್ನು ಮಿಲಿಟಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT