ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಹಿಂಸಾಚಾರ: ಡೊನಾಲ್ಡ್‌ ಟ್ರಂಪ್ ಟ್ವಿಟರ್‌ ಖಾತೆ ಶಾಶ್ವತವಾಗಿ ಸ್ಥಗಿತ

Last Updated 9 ಜನವರಿ 2021, 1:55 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಅಧಿಕಾರದ ಕೇಂದ್ರ ಸ್ಥಾನವೂ ಆದ ‘ಯು.ಎಸ್.ಕ್ಯಾಪಿಟಲ್’ನಲ್ಲಿ ಬುಧವಾರ ನಡೆದ ದಾಂದಲೆಗೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್‌ ತಿಳಿಸಿದೆ. ಟ್ರಂಪ್‌ ಬೆಂಬಲಿಗರು ಹಿಂಸಾಚಾರ ನಡೆಸಿದ ಬಳಿಕ (ಬುಧವಾರ) ಟ್ರಂಪ್‌ ಖಾತೆಯನ್ನು 12 ತಾಸು ಅಮಾನತಿನಲ್ಲಿಡಲಾಗಿತ್ತು.

‘ಡೊನಾಲ್ಡ್‌ ಟ್ರಂಪ್ ಅವರ ಖಾತೆಯಿಂದ ಇತ್ತೀಚೆಗೆ ಮಾಡಲಾದ ಟ್ವೀಟ್‌ಗಳನ್ನು ಮತ್ತು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಗಲಭೆಗೆ ಮತ್ತಷ್ಟು ಪ್ರಚೋಧನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಟ್ವೀಟ್‌ ಮೂಲಕ ತಿಳಿಸಲಾಗಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಟ್ರಂಪ್ ಅವರ ಖಾತೆಗಳನ್ನು ನಿಯಂತ್ರಿಸಿವೆ. ಟ್ರಂಪ್‌ ಅಧ್ಯಕ್ಷೀಯ ಅಧಿಕಾರ ಅವಧಿ ಮುಗಿಯುವವರೆಗೆ ಅವರ ಖಾತೆಯನ್ನು ಅಮಾನತುಗೊಳಿಸುವುದಾಗಿ ಫೇಸ್‌ಬುಕ್‌ ಈ ವಾರದ ಆರಂಭದಲ್ಲಿಯೇ ತಿಳಿಸಿತ್ತು.

ಡೆಮಾಕ್ರಟಿಕ್‌ ಪಕ್ಷದಿಂದ ಚುನಾಯಿತರಾಗಿರುವ ಜೋ ಬೈಡನ್‌ ಅವರು ಜನವರಿ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ‘ಚುನಾವಣೆಯ ಫಲಿತಾಂಶವನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಆದರೂ, ಜನವರಿ 20 ರಂದು ಕ್ರಮಬದ್ಧವಾದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT