ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ದುರ್ಬಳಕೆ ಆರೋಪ: ಟೆಕ್ಸಾಸ್‌ ಅಟಾರ್ನಿ ಜನರಲ್‌ ವಿರುದ್ಧ ಟ್ವಿಟರ್‌ ಕೇಸ್‌

Last Updated 9 ಮಾರ್ಚ್ 2021, 6:19 IST
ಅಕ್ಷರ ಗಾತ್ರ

ಡಲ್ಲಾಸ್: ಅಮೆರಿಕದ ಕ್ಯಾಪಿಟಲ್‌ ಹಿಲ್‌ ಹಿಂಸಾಚಾರದ ಬಳಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಟ್ವಿಟರ್‌ ನಿಷೇಧಿಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಟೆಕ್ಸಾಸ್‌ ಅಟಾರ್ನಿ ಜನರಲ್‌ ಕೆನ್‌ ‍ಪೆಕ್ಸಾಟನ್‌ ವಿರುದ್ಧ ಟ್ವಿಟರ್‌ ಸೋಮವಾರ ಮೊಕದ್ದಮೆ ಹೂಡಿದೆ.

ಕ್ಯಾಪಿಟಲ್‌ ಹಿಲ್‌ ದಾಳಿಯ ಬಳಿಕ ಪೆಕ್ಸಾಟನ್‌ ಅವರು, ಟ್ವಿಟರ್‌ ಮತ್ತು ಇತರೆ ನಾಲ್ಕು ತಂತ್ರಜ್ಞಾನ ಕಂಪೆನಿಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಈ ತಾಣಗಳನ್ನು ಡೊನಾಲ್ಡ್‌ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಳಸಲಾಗಿದೆ. ಹಾಗಾಗಿ ಈ ಸಂಸ್ಥೆಗಳು, ಮಾಹಿತಿಗಳ ಆಧುನೀಕರಣ ನೀತಿ ಮತ್ತು ಆಂತರಿಕಸಂವಹನ ಸಂಗ್ರಹಕ್ಕೆ ಸಂಬಂಧಿತ ದಾಖಲೆಗಳನ್ನು ನೀಡಬೇಕು ಎಂದು ಅಟಾರ್ನಿ ಜನರಲ್‌ ಕಚೇರಿ ಸೂಚಿಸಿತ್ತು.

ಇದಕ್ಕೆ ಪ್ರತ್ಯುತ್ತರವಾಗಿ ಟ್ವಿಟರ್‌, ಪೆಕ್ಸಾಟನ್‌ ವಿರುದ್ಧ ಸೋಮವಾರ ಮೊಕದ್ದಮೆ ಹೂಡಿದೆ. ಎಲ್ಲರಿಗೂ ವಾಕ್‌ ಸ್ವಾತಂತ್ರ್ಯವಿದೆ.ಈ ಅಂಶವನ್ನು ಪರಿಗಣಿಸಿ, ಪೆಕ್ಸಾಟನ್‌, ಟ್ವಿಟರ್‌ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸುವಂತೆ ನ್ಯಾಯಧೀಶರು ಆದೇಶಿಸಬೇಕು ಎಂದು ಟ್ವಿಟರ್‌ ಮನವಿ ಮಾಡಿದೆ.

‘ಟ್ರಂಪ್‌ ಅವರ ಖಾತೆಯನ್ನು ನಿಷೇಧಿಸುವ ನಿರ್ಧಾರವನ್ನು ಪೆಕ್ಸಾಟನ್‌ ಸ್ವೀಕರಿಸಿಲ್ಲ. ಹಾಗಾಗಿ ಇದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತನ್ನ ಎಲ್ಲಾ ಅಧಿಕಾರವನ್ನು ಬಳಸುವುದಾಗಿ ಅವರೇ ಹೇಳಿದ್ದರು’ ಎಂದು ಟ್ವಿಟರ್‌ ಪರ ವಕೀಲರು, ಮೊಕದ್ದಮೆಯಲ್ಲಿ ಹೇಳಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ನ್ಯಾಯಾಲಯವೊಂದರಲ್ಲಿ ಈ ಮೊಕದ್ದಮೆ ಹೂಡಲಾಗಿದೆ.

ಟ್ವಿಟರ್‌, ಫೇಸ್‌ಬುಕ್‌, ಆ್ಯಪಲ್‌ ಮತ್ತು ಅಮೆಜಾನ್‌ ಸಂಸ್ಥೆಗಳ ಮೇಲೆ ತನಿಖೆ ನಡೆಸುವಂತೆ ಪೆಕ್ಸಾಟನ್‌ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT