ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್‌‌ನಲ್ಲಿ ಚಂಡಮಾರುತ: ಸಾವಿರಾರು ಮಂದಿ ಸುರಕ್ಷಿತ ಸ್ಥಳಕ್ಕೆ

Last Updated 26 ಅಕ್ಟೋಬರ್ 2020, 7:19 IST
ಅಕ್ಷರ ಗಾತ್ರ

ಮನಿಲಾ: ಫಿಲಿಪ್ಪೀನ್ಸ್‌‌ನ ದಕ್ಷಿಣ ಮನಿಲಾ ಪ್ರಾಂತ್ಯದಲ್ಲಿ ಸೋಮವಾರ ‘ಮೊಲಾವೆ’ ಚಂಡಮಾರುತ ಅಪ್ಪಳಿಸಿದ್ದು, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

‘ಮೊಲಾವೆ ಚಂಡಮಾರುತದಿಂದಾಗಿ ಹಲವು ಮನೆಗಳು ಹಾನಿಯಾಗಿವೆ. ಈವರೆಗೂ ಯಾವುದೇ ಪ್ರಾಣ ಹಾನಿಯಾದ ವರದಿಯಾಗಿಲ್ಲ. ಬಟಂಗಾಸ್ ಪ್ರಾಂತ್ಯದಲ್ಲಿ ನೌಕೆಯೊಂದು ಮುಳುಗಡೆಯಾಗಿದ್ದು, ಇದರಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿಯನ್ನು ರಕ್ಷಿಸಲಾಗಿದೆ. ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಂಡಮಾರುತವು ಗಂಟೆಗೆ ಸುಮಾರು 125 ಕಿ.ಮೀ. ವೇಗದಲ್ಲಿ ಬೀಸಿದೆ ಎಂದು ಸರ್ಕಾರಿ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.

‘ಈವರೆಗೆ 25,000ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ ಎಂದು ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ.

‘ಚಂಡಮಾರುತದಿಂದಾಗಿ ಏಕಾಏಕಿ ಗಾಳಿ ಬೀಸುತ್ತಿದೆ. ಇದರಿಂದಾಗಿ ಮನೆಗಳ ಮೇಲ್ಫಾವಣಿಗಳು ಹಾರಿ ಹೋಗಿವೆ. ಹಾಗಾಗಿ ನಮ್ಮನ್ನು ಇಲ್ಲಿಂದ ರಕ್ಷಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದರು’ ಎಂದು ಓರಿಯಂಟಲ್ ಮಿಂಡೊರೊ ಪ್ರಾಂತ್ಯದ ಗರ್ವನರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT