ಮನಿಲಾ: ಪ್ರಬಲ ಕ್ಯಾನ್ಸನ್ ಚಂಡಮಾರುತ ಮಂಗಳವಾರ ಪೂರ್ವ ಫಿಲಿಪ್ಪಿನ್ಸ್ ಅನ್ನು ಅಪ್ಪಳಿಸಿದೆ. ತೀವ್ರಗಾಳಿಯಿಂದ ಇಲ್ಲಿನ ಹಲವಾರು ಪ್ರಾಂತ್ಯಗಳಲ್ಲಿ ವಿದ್ಯುತ್ ಕಡಿತ ಸಂಭವಿಸಿದೆ.
ಮಾರುತವು ಗಂಟೆಗೆ 120ರಿಂದ 150 ಕಿ.ಮೀ ವೇಗವಾಗಿ ಬೀಸುತ್ತಿದ್ದು, ಮಂಗಳವಾರ ಮುಂಜಾನೆ ಪೂರ್ವ ಸಮಾರ್ ಪ್ರಾಂತ್ಯದ ಕರಾವಳಿ ಪಟ್ಟಣ ಹೆರ್ನಾನಿಗೆ ಅಪ್ಪಳಿಸಿದೆ.
ಇಲ್ಲಿನ ಹಲವೆಡೆ ಭಾರಿ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಸ್ಥಳೀಯ ಹವಾಮಾನ ಇಲಾಖೆ ನೀಡಿದೆ.
ಫಿಲಿಪ್ಪಿನ್ಸ್‌ನಲ್ಲಿ ಮುಂಗಾರು ಮಳೆಯನ್ನು ಹೊರತುಪಡಿಸಿ ಪ್ರತಿ ವರ್ಷ ಸುಮಾರು 20 ಚಂಡಮಾರುತಗಳು ಅಪ್ಪಳಿಸುತ್ತವೆ. ‘ಪೆಸಿಫಿಕ್ ರಿಂಗ್ ಆಫ್ ಫೈರ್’ ಎಂದು ಕರೆಯುವ ಈ ದೇಶದಲ್ಲಿ ಭೂಕಂಪ ಮತ್ತು ಜ್ವಾಲಾಮುಖಿ ಸ್ಪೋಟಗಳು ಸಂಭವಿಸುತ್ತಲೇ ಇರುತ್ತವೆ. ಇದು ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.