ಶನಿವಾರ, ಅಕ್ಟೋಬರ್ 16, 2021
20 °C

ಹಾಂಗ್‌ಕಾಂಗ್‌ಗೆ ಅಪ್ಪಳಿಸಿದ ’ಕೊಂಪಾಸು’ ಚಂಡಮಾರುತ: ಶಾಲೆ, ಷೇರುಪೇಟೆ ಸ್ಥಗಿತ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಕೊಂಪಾಸು ಚಂಡಮಾರುತ ಕಾರಣ ಹಾಂಗ್‌ಕಾಂಗ್‌ನಲ್ಲಿ ಬುಧವಾರ ಶಾಲೆಗಳನ್ನು ಮುಚ್ಚಲಾಗಿದ್ದು, ಷೇರು ಮಾರುಕಟ್ಟೆ ಹಾಗೂ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಹಾಂಗ್‌ಕಾಂಗ್‌ ನಗರದ ದಕ್ಷಿಣ ಭಾಗದ ಮೂಲದ ಚಂಡಮಾರುತ ಹಾಯ್ದು ಹೋಗಿದೆ. ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.  ಜನರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ಗಂಟೆಗೆ 83 ಕಿ.ಮೀ. ವೇಗದೊಂದಿಗೆ ಚಂಡಮಾರುತ ಸಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಚಂಡಮಾರುತ ಗಂಟೆಗೆ 101 ಕಿ.ಮೀ. ವೇಗದೊಂದಿಗೆ ಮುನ್ನುಗ್ಗುತ್ತಿದೆ ಎಂದು ಹಾಂಗ್‌ಕಾಂಗ್‌ ಹವಾಮಾನ ಕೇಂದ್ರ ತಿಳಿಸಿದೆ.

ದಕ್ಷಿಣ ಚೀನಾ ಸಮುದ್ರದ ಉತ್ತರ ಭಾಗದ ಮೂಲಕ, ಚೀನಾದ ಹೈನಾನ್‌ ಪ್ರಾಂತ್ಯದತ್ತ ಚಂಡಮಾರುತ ಸಾಗುವ ನಿರೀಕ್ಷೆ ಇದೆ. ನಂತರ ವಿಯೆಟ್ನಾಂನ ಉತ್ತರ ಭಾಗದಲ್ಲಿ ನೆಲಸ್ಪರ್ಶ ಮಾಡುವುದು ಎಂದು ಹವಾಮಾನ ಕೇಂದ್ರ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು