ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಸಾರ್ವಜನಿಕರಿಗೆ ನೀಡಲು ಆರಂಭಿಸಿದ ಬ್ರಿಟನ್

Last Updated 4 ಜನವರಿ 2021, 10:47 IST
ಅಕ್ಷರ ಗಾತ್ರ

ಲಂಡನ್: ಆಸ್ಟ್ರಾಜೆನೆಕಾ–ಆಕ್ಸ್‌ಫರ್ಡ್‌ ಕೋವಿಡ್‌–19 ಲಸಿಕೆಯನ್ನು ನಾಗರಿಕರಿಗೆ ನೀಡುವ ಪ್ರಕ್ರಿಯೆಯನ್ನು ಬ್ರಿಟನ್ ಆರಂಭಿಸಿದೆ. 82 ವರ್ಷ ವಯಸ್ಸಿನ ಬ್ರಿಯಾನ್ ಪಿಂಕರ್ ಎಂಬ ಡಯಾಲಿಸಿಸ್‌ಗೆ ಒಳಗಾಗುತ್ತಿರುವ ವ್ಯಕ್ತಿಗೆ ಸೋಮವಾರ ಲಸಿಕೆ ನೀಡಲಾಗಿದೆ.

ನಿವೃತ್ತ ನಿರ್ವಹಣಾ ವ್ಯವಸ್ಥಾಪಕರಾಗಿರುವ ಪಿಂಕರ್ ಅವರು ಲಸಿಕೆ ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ್ದಾರೆ.

‘ಇಂದು ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದಕ್ಕೆ ತುಂಬಾ ಸಂತಸವಾಗಿದೆ. ಆಕ್ಸ್‌ಫರ್ಡ್‌ನಲ್ಲಿ ಈ ಲಸಿಕೆ ಅಭಿವೃದ್ಧಿಪಡಿಸಿರುವುದಕ್ಕೆ ಹೆಮ್ಮೆಯಿದೆ’ ಎಂದು ಅವರು ಹೇಳಿದ್ದಾರೆ.

‘ಇಂದು ಶುಶ್ರೂಷಕಿಯರು, ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಾವಂತರಾಗಿದ್ದಾರೆ. ಈ ವರ್ಷ ಪತ್ನಿ ಜತೆ 48ನೇ ವಿವಾಹ ವಾರ್ಷಿಕೋತ್ಸವ ಆಚರಿಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಲಸಿಕೆ ಹಾಕಿಸಿಕೊಂಡ ಬಳಿಕ ಪಿಂಕರ್ ಹೇಳಿದ್ದಾರೆ.

ಆಕ್ಸ್‌ಫರ್ಡ್ ಲಸಿಕೆ ತಂಡ ಮತ್ತು ಲಸಿಕೆ ಪ್ರಯೋಗದ ಮುಖ್ಯ ಅಧಿಕಾರಿ ಆಂಡ್ರ್ಯೂ ಪೊಲಾರ್ಡ್ ಅವರೂ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT