ಮಂಗಳವಾರ, ಮಾರ್ಚ್ 21, 2023
20 °C

ಬ್ರಿಟನ್‌: ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಸಲಿಂಗಿಗಳ ವಿವಾಹಕ್ಕೆ ಅನುಮತಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಸಲಿಂಗಿ ಜೋಡಿಗೆ ತನ್ನ ಆವರಣದಲ್ಲಿ ಮದುವೆಯಾಗಲು ಅವಕಾಶ ನೀಡಲಾಗುವುದು’ ಎಂದು ಬ್ರಿಟನ್‌ನ ಮೆಥೋಡಿಸ್ಟ್ ಚರ್ಚ್ ಬುಧವಾರ ಘೋಷಿಸಿದೆ.

ಈ ಸಂಬಂಧ ನಡೆಸಲಾದ ಮೆಥೋಡಿಸ್ಟ್ ಸಭೆಯಲ್ಲಿ 254 ಮಂದಿ ಪರವಾಗಿ ಮತ್ತು 46 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು.

ಈ ಚರ್ಚ್‌ 164,000 ಸದಸ್ಯರನ್ನು ಒಳಗೊಂಡಿದ್ದು, ಇದು ಬ್ರಿಟನ್‌ನ ನಾಲ್ಕನೇ ಅತಿ ದೊಡ್ಡ ಚರ್ಚ್‌ ಆಗಿದೆ.

‘ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹಲವು ವರ್ಷಗಳ ಹೋರಾಟದ ಬಳಿಕ ಈ ಅವಕಾಶ ಸಿಕ್ಕಿದೆ’ ಎಂದು ಮೆಥೋಡಿಸ್ಟ್‌ ಚರ್ಚ್‌ನ ಪ್ರಚಾರ ಗುಂಪು ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು