ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವಿಶ್ವಾಸಮತ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಅವರು ಅಧಿಕಾರವನ್ನು ಭದ್ರಪಡಿಸಿಕೊಂಡಿದ್ದಾರೆ.

ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಜಾನ್ಸನ್ 211 ಮತಗಳನ್ನು ಗಳಿಸಿದರು. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್ ಪಾರ್ಟಿ)148 ಮಂದಿ ಸಂಸದರು ಬೋರಿಸ್ ವಿರುದ್ಧ ಮತ ಚಲಾಯಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೋವಿಡ್ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್ ಅವರ ವಿರುದ್ಧ ಆರೋಪಿಸಿದ್ದರು. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.

ಕನ್ಸರ್‌ವೇಟಿವ್ ಪಾರ್ಟಿಯ ಹಲವು ಸದಸ್ಯರು ಬ್ರಿಟನ್ ಸಂಸತ್‌ನಲ್ಲಿ ಬೋರಿಸ್ ಜಾನ್ಸನ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ‘ಬ್ಯಾಕ್‌ಬೆಂಚ್ 1922 ಕಮಿಟಿ ( ಕನ್ಸರ್ವೇಟಿವ್ ಪಕ್ಷದ ಸದಸ್ಯರ ಸಮಿತಿ)’ಯ ಮುಖ್ಯಸ್ಥ ಸರ್ ಗ್ರಹಮ್ ಬ್ರಾಡಿ ಇತ್ತೀಚೆಗೆ ಹೇಳಿದ್ದರು. ಅಂತಿಮವಾಗಿ ಜಾನ್ಸನ್ ಅವರು ಶೇ 58.6 ಮತ ಪಡೆಯುವ ಮೂಲಕ ವಿಶ್ವಾಸಮತ ಗೆದ್ದಿದ್ದಾರೆ.

ಈ ಫಲಿತಾಂಶವನ್ನು ಗುಡ್ ನ್ಯೂಸ್ (ಒಳ್ಳೆ ಸುದ್ದಿ) ಮತ್ತು ನಿರ್ಣಾಯಕ ಎಂದು ಬೋರಿಸ್ ಜಾನ್ಸನ್ ವಿಶ್ಲೇಷಿಸಿದ್ದಾರೆ. ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.