ಬ್ರಿಟನ್: ಕಳೆದ ವರ್ಷ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್ II ಅವರ ಹಿರಿಯ ಮಗ ಚಾರ್ಲ್ಸ್ III ಅವರ ಪಟ್ಟಾಭಿಷೇಕ ನಡೆಯಲಿದ್ದು, ಈ ಹಿನ್ನೆಲೆ ಚಾರ್ಲ್ಸ್ ಅವರ ಭಾವಚಿತ್ರವನ್ನು ಉಚಿತವಾಗಿ ಜನರಿಗೆ ಹಂಚಲು ಉತ್ತೇಜನೆ ಕೊಡಲಾಗುತ್ತಿದೆ. ಇದಕ್ಕಾಗಿ ಯೋಜನೆ ರೂಪಿಸಲು ಸಾರ್ವಜನಿಕ ವಲಯದ ಅಧಿಕಾರಿಗಳಿಗೆ 8 ಮಿಲಿಯನ್ ಪೌಂಡನ್ನು ಬ್ರಿಟನ್ ಸರ್ಕಾರ ಬಿಡುಗಡೆಗೊಳಿಸಿದೆ.
ಸಾರ್ವಜನಿಕ ವಲಯಗಳಾದ ಸರ್ಕಾರಿ ಮಂಡಳಿಗಳು, ಕೋರ್ಟ್, ವಿದ್ಯಾಲಯಗಳು, ಪೊಲೀಸ್ ಪಡೆ, ಸರ್ಕಾರೀ ಅನುದಾನಿತ ಸಂಸ್ಥೆಗಳ ಮೂಲಕ 74 ವರ್ಷದ ಚಾರ್ಲ್ಸ್ 3 ಅವರ ಭಾವಚಿತ್ರ ಬಿಟ್ರನ್‌ನ ಉದ್ದಗಲಕ್ಕೂ ಹಂಚಲಾಗುತ್ತಿದೆ. ಇದಕ್ಕೆ ತೆರಿಗೆ ಪಾವತಿದಾರರ ತೆರಿಗೆಯನ್ನು ದೇಣಿಗೆಯಾಗಿ ಬಳಸಿಕೊಳ್ಳಲಾಗುತ್ತಿದೆ.
’ಉಚಿತವಾಗಿ ಕಿಂಗ್ ಅವರ ಫೊಟೋ ವಿತರಿಸಲು ಸರ್ಕಾರ ತೆರಿಗೆದಾರರ ತೆರಿಗೆ ಉಪಯೋಗಿಸುವುದರ ಮೂಲಕ ಹಣವನ್ನು ಪೋಲು ಮಾಡುತ್ತಿದೆ’ ಎಂಬುದು ವಿಶ್ಲೇಷಕರೊಬ್ಬರ ಅಭಿಪ್ರಾಯವಾಗಿದೆ.
ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆ ಚರ್ಚ್‌ನಲ್ಲಿ ಮೇ 6 ರಂದು ಕಿಂಗ್ ಚಾರ್ಲ್ಸ್ 3 ಹಾಗೂ ರಾಣಿ ಕಂಸೋರ್ಟ್ ಕ್ಯಾಮಿಲ್ಲಾ ಅವರಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.