ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬ್ರಿಟನ್‌ ಯತ್ನ: ರಷ್ಯಾ ಟುಡೇ

Last Updated 3 ಮಾರ್ಚ್ 2022, 14:18 IST
ಅಕ್ಷರ ಗಾತ್ರ

ಲಂಡನ್: ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬ್ರಿಟನ್‌ ಯತ್ನಿಸುತ್ತಿದೆ ಎಂದು ರಷ್ಯಾದ ಸರ್ಕಾರಿ ಅನುದಾನಿತ ಟಿವಿ ಚಾನೆಲ್ ರಷ್ಯಾ ಟುಡೇ ಆರೋಪಿಸಿದೆ.

ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ಜೊತೆ ಮಾತನಾಡಿರುವ ರಷ್ಯಾ ಟುಡೇ ಪ್ರಧಾನ ಸಂಪಾದಕ ಅನ್ನಾ ಬೆಲ್ಕಿನಾ, ‘ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬ್ರಿಟನ್‌ ಯತ್ನಿಸುತ್ತಿದೆ. ಈ ಯತ್ನದಲ್ಲಿ ನ್ಯಾಯ ಸಮ್ಮತವಲ್ಲದ ನಡೆಗಳಿವೆ’ ಎಂದು ತಿಳಿಸಿದ್ದಾರೆ.

‘ಬ್ರಿಟನ್‌ ದೇಶವು ಈಗ ಬ್ರೆಕ್ಸಿಟ್‌ ಅನ್ನು ಮರೆತಿದೆ. ಯುರೋಪಿನ ಉಳಿದ ದೇಶಗಳ ಮೇಲೆ ಪ್ರಭಾವ ಬೀರಲು ಅದು ಪ್ರಯತ್ನಿಸುತ್ತಿದೆ’ ಎಂದೂ ಬೆಲ್ಕಿನಾ ಹೇಳಿದ್ದಾರೆ.‌

ಬ್ರಿಟನ್‌ನಲ್ಲಿ ರಷ್ಯಾ ಟುಡೇ ಕಂಟೆಂಟ್‌ಗಳ ಪ್ರಸಾರವನ್ನು ತಡೆಯಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಬ್ರಿಟನ್‌ ಸಚಿವೆ ನಾಡಿನ್‌ ಡೋರಿಸ್‌ ಪತ್ರ ಬರೆದಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಅಪಾರ ಪ್ರಮಾಣದ ಸಾವುನೋವುಗಳಾಗಿದ್ದು, ಪುಟಿನ್‌ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆದಿವೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT