ಬುಧವಾರ, ಸೆಪ್ಟೆಂಬರ್ 22, 2021
21 °C

ಅಫ್ಗನ್ ಜನತೆಗೆ ಜಾಗತಿಕ ರಾಷ್ಟ್ರಗಳು ನೆರವಾಗಲು ವಿಶ್ವಸಂಸ್ಥೆ ಕರೆ

ಎಪಿ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಅಫ್ಗಾನಿಸ್ತಾನದ ಜನತೆಗೆ ಮಾನವೀಯ ನೆಲೆಯಲ್ಲಿ ನೆರವಾಗಲು ಜಾಗತಿಕ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಮೂಲಭೂತ ಸೌಲಭ್ಯಗಳು ಸಂಪೂರ್ಣವಾಗಿ ಕುಸಿಯುವ ಭೀತಿಯಲ್ಲಿದೆ. ಈ ಕಠಿಣ ಸಮಯದಲ್ಲಿ ಅರ್ಧದಷ್ಟು ಜನರಿಗೆ ಬದುಕಲು ಮಾನವೀಯ ನೆರವು ಬೇಕಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 

ಎರಡು ದಶಕಗಳ ಬಳಿಕ ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆಯು ನಿರ್ಗಮಿಸಿದೆ. ಇದರೊಂದಿಗೆ ಅಫ್ಗನ್ ಸಂಪೂರ್ಣವಾಗಿ ತಾಲಿಬಾನಿಗಳ ವಶವಾಗಿದೆ.

ಇದರಿಂದಾಗಿ ಅಫ್ಗನ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

'ಅಫ್ಗನ್‌ನಲ್ಲಿ ಎದುರಾಗಲಿರುವ ಮಾನವೀಯ ದುರಂತದ ಅಂಕಿಅಂಶಗಳನ್ನು ಗುಟೆರೆಸ್ ಬಹಿರಂಗಪಡಿಸಿದರು. 1.8 ಕೋಟಿ ಅಫ್ಗನ್ನರಿಗೆ ಬದುಕಲು ನೆರವು ಬೇಕಿದೆ. ಮೂವರಲ್ಲಿ ಒಬ್ಬರಿಗೆ ಮುಂದಿನ ಆಹಾರ ಎಲ್ಲಿಂದ ಸಿಗುತ್ತದೆ ಎಂದು ತಿಳಿದಿಲ್ಲ. ಮುಂದಿನ ವರ್ಷದೊಳಗೆ ಒಟ್ಟಾರೆ ಐದು ವರ್ಷಕ್ಕಿಂತ ಕಡಿಮ ವಯಸ್ಸಿನ ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆ ಎದುರಿಸುವ ಭೀತಿಯಿದೆ. ಅಲ್ಲದೆ ಪ್ರತಿ ದಿನ ಜನರು ಮೂಲಭೂತ ಸೇವೆಗಳ ಲಭ್ಯತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ' ಎಂದು ವಿವರಿಸಿದ್ದಾರೆ.

'ತೀವ್ರ ಬರಗಾಲ, ಚಳಿಗಾಲದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಆಹಾರ, ಆಶ್ರಯ ಮತ್ತು ಆರೋಗ್ಯ ಪೂರೈಕೆಗಳನ್ನು ತುರ್ತಾಗಿ ಮಾಡಬೇಕಿದೆ' ಎಂದು ಗುಟೆರೆಸ್ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು