ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಮಂತ ರಾಷ್ಟ್ರಗಳ ಇಬ್ಬಗೆ ನೀತಿ: ಆರೋಪ

Last Updated 16 ನವೆಂಬರ್ 2022, 13:56 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಮಂತ ರಾಷ್ಟ್ರಗಳ ಇಬ್ಬಗೆ ನೀತಿಯನ್ನು ಬ್ರೆಜಿಲ್‌, ದಕ್ಷಿಣ ಆಫ್ರಿಕಾ, ಭಾರತ, ಚೀನಾ ಒಳಗೊಂಡ‘ಬೇಸಿಕ್’ ರಾಷ್ಟ್ರಗಳುಈಜಿಪ್ಟ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 27ನೇ ಹವಾಮಾನ ಶೃಂಗಸಭೆಯಲ್ಲಿ ಟೀಕಿಸಿವೆ.

ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನೆರವು ನೀಡುವುದಾಗಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಶ್ರೀಮಂತ ರಾಷ್ಟ್ರಗಳು ಬದ್ಧವಾಗಿಲ್ಲ.ಒಪ್ಪಂದದಲ್ಲಿ ಹೇಳಿರುವುದಕ್ಕಿಂತಪ್ರತಿ ವರ್ಷ ₹812 ಕೋಟಿ ನೆರವು ಕಡಿಮೆ ಆಗುತ್ತಿದೆ ಎಂದು ಸದಸ್ಯ ರಾಷ್ಟ್ರಗಳು ಆರೋಪಿಸಿವೆ.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಮಾಮಾನ ಬದಲಾವಣೆ ವಿಷಯದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಿಲ್ಲ ಅಥವಾ ಅದಕ್ಕಾಗಿ ಪ್ರಯತ್ನಪಡುತ್ತಿಲ್ಲ. ಹಣಕಾಸು ನೆರವು ನೀಡುವುದರಿಂದ ಹಿಂದೆ ಸರಿದಿವೆ ಮತ್ತು ಒಪ್ಪಂದಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಬೇಸಿಕ್‌ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

‘ಕಳೆದ ಕೆಲ ವರ್ಷಗಳಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪಳೆಯುಳಿಕೆ ಇಂಧನವನ್ನು ತಯಾರಿಸುವ ಮತ್ತು ಬಳಸುವ ಪ್ರಮಾಣದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. ಅದರೆ, ಈ ರೀತಿಯ ಇಂಧನ ಬಳಸದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳನ್ನು ಶ್ರೀಮಂತ ರಾಷ್ಟ್ರಗಳು ಒತ್ತಾಯಿಸುತ್ತವೆ. ಈ ರೀತಿಯ ಇಬ್ಬಗೆ ನೀತಿಗಳು ಹವಾಮಾನ ನೀತಿ ಮತ್ತು ಕಾನೂನಿನ ಜೊತೆ ಹೊಂದಿಕೆ ಆಗುವುದಿಲ್ಲ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT