ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆಗೆ ನಿರ್ಬಂಧ: ವಿಶ್ವಸಂಸ್ಥೆ ಕಳವಳ

Last Updated 18 ಸೆಪ್ಟೆಂಬರ್ 2022, 12:31 IST
ಅಕ್ಷರ ಗಾತ್ರ

ಇಸ್ಲಮಾಬಾದ್‌: ಅಫ್ಘಾನಿಸ್ತಾನದಲ್ಲಿ ಒಂದು ವರ್ಷದಿಂದ ಪ್ರೌಢಶಾಲಾ ಹಂತದ ಶಿಕ್ಷಣದಿಂದ ಹೆಣ್ಣುಮಕ್ಕಳನ್ನು ಹೊರಗಿಟ್ವಿರುವುದು ನಾಚಿಕೆಗೇಡು ಎಂದು ವಿಶ್ವಸಂಸ್ಥೆ ಭಾನುವಾರ ಕಿಡಿಕಾರಿದೆ.

ಇದೇ ವೇಳೆ ಹೆಣ್ಣುಮಕ್ಕಳಿಗೆ 7–12ನೇ ತರಗತಿಗಳಿಗೆ ಪ್ರವೇಶ ಕಲ್ಪಿಸಬೇಕು, ಶಿಕ್ಷಣ ನೀಡಬೇಕು ಎಂದು ಆಡಳಿತಾರೂಢ ತಾಲಿಬಾನ್‌ ಸರ್ಕಾರಕ್ಕೆ ಹೇಳಿದೆ.

‘ಶಾಲಾ ಶಿಕ್ಷಣದಿಂದ ಹೆಣ್ಣು ಮಕ್ಕಳನ್ನು ಹೊರಗಿಟ್ಟಿರುವುದು ದುರಂತ, ನಾಚಿಕೆಗೇಡು. ಇದರಿಂದ ಹಲವು ಪೀಳಿಗೆಯ ಹೆಣ್ಣುಮಕ್ಕಳ ಭವಿಷ್ಯ ಮತ್ತು ದೇಶದ ಭವಿಷ್ಯವು ಹಾಳಾಗಲಿದೆ’ ಎಂದು ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಕಾರ್ಯಕ್ರಮದ ಮುಖ್ಯಸ್ಥ ಮಾರ್ಕುಸ್‌ ಪಾಟ್‌ಝೆಲ್‌ ಅವರು ಬೇಸರ ವ್ಯಕ್ತಪಡಿಸಿದರು.

ಮೂಲಭೂತ ಸ್ವಾತಂತ್ರ್ಯ ಹತ್ತಿಕ್ಕುವುದು ಸೇರಿ ಹಲವು ನಿರ್ಬಂಧ ಕ್ರಮಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿವೆ. ಅಂತಿಮವಾಗಿ ಅಭದ್ರತೆ, ಬಡತನ, ಪ್ರತ್ಯೇಕತೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕಳೆದ ಒಂದು ವರ್ಷದಿಂದ 10 ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT