ಶುಕ್ರವಾರ, ಏಪ್ರಿಲ್ 23, 2021
30 °C

ಎಂಜಿನ್‌ ದೋಷಕ್ಕೀಡಾಗಿ, ಬಿಡಿಭಾಗ ಬೀಳಿಸಿಕೊಂಡು ಹೋಗಿದ್ದ ವಿಮಾನ ಸೇಫ್‌ಲ್ಯಾಂಡ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೊಲರಾಡೊ: ಡೆನ್ವರ್‌ನಿಂದ ಹೊನೊಲುಲುಗೆ ಹಾರಾಟ ನಡೆಸುತ್ತಿದ್ದ ವೇಳೆ ಎಂಜಿನ್‌ ದೋಷಕ್ಕೆ ಒಳಗಾಗಿ, ಬಿಡಿ ಭಾಗಗಳನ್ನು ಬೀಳಿಸಿಕೊಂಡು ಹೋಗಿದ್ದ ಅಮೆರಿಕದ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

ಬೋಯಿಂಗ್ 777-200- ಯುಎ328 ಸಂಖ್ಯೆಯ ವಿಮಾನವು ಡೆನ್ವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 12: 15ರಲ್ಲಿ ಹೊನೊಲುಲುಗೆ ಪ್ರಯಾಣ ಬೆಳೆಸಿತ್ತು ಎಂದು ವಿಮಾನ ನಿಲ್ದಾಣದ ವಕ್ತಾರರಾದ ಅಲೆಕ್ಸ್ ರೆಂಟೇರಿಯಾ ಹೇಳಿದರು.

'ಎಂಜಿನ್‌ ಹಾನಿಯಾದ ಹಿನ್ನೆಲೆಯಲ್ಲಿ ವಿಮಾನವು ಪುನಃ ಡೆನ್ವರ್‌ಗೆ ಹಿಂದಿರುಗಿತು. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. 241 ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ,' ಎಂದು ಯುನೈಟೆಡ್‌ ಏರ್‌ಲೈನ್ಸ್‌ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

'ವಿಮಾನ ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಬಲ-ಎಂಜಿನ್ ವೈಫಲ್ಯ ಅನುಭವಿಸಿತು. ವಿಮಾನ ಹಾರಾಟ ನಡೆಸುತ್ತಿರುವಾಗಲೇ ಬಿಡಿಭಾಗಗಳನ್ನು ಕೆಳಗೆ ಬೀಳಿಸುತ್ತಾ ಹೋಯಿತು ಎಂಬ ವರದಿಗಳು ನಮ್ಮ ಗಮನಕ್ಕೆ ಬಂದಿವೆ,' ಎಂದು ಅಮೆರಿಕದ ವಾಯುಯಾನ ಇಲಾಖೆ ತಿಳಿಸಿದೆ.

ಎಂಜಿನ್‌ ವೈಫಲ್ಯಕ್ಕೆ ಅನುಭವಿಸಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ತಮಗಾದ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. 'ಪ್ರಮಾಣಿಕವಾಗಿ ಹೇಳುತ್ತೇನೆ... ಒಂದು ಹಂತದಲ್ಲಿ ನಾವು ಸಾಯುತ್ತೇವೆ ಎಂದು ಭಾವಿಸಿದ್ದೇ. ಏಕೆಂದರೆ, ಸ್ಫೋಟದ ನಂತರ ನಾವು ಎತ್ತರದಿಂದ ಕುಸಿಯಲಾರಂಭಿಸಿದ್ದೆವು' ಎಂದು ಫ್ಲೋರಿಡಾದ ಫೋರ್ಟ್ ಲಾಡೆರ್‌ಡೇಲ್‌ನ ಪ್ರಯಾಣಿಕ ಡೇವಿಡ್ ಡೆಲುಸಿಯಾ ಡೆನ್ವರ್ ಹೇಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು