ಶುಕ್ರವಾರ, ಏಪ್ರಿಲ್ 16, 2021
31 °C

ರಕ್ಷಣಾ ಉದ್ಯಮ ಕ್ಷೇತ್ರದ ಸ್ವಾವಲಂಬನೆಗೆ ಭಾರತಕ್ಕೆ ನಿರಂತರ ನೆರವು: ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ರಕ್ಷಣಾ ಉದ್ಯಮ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತಕ್ಕೆ ಸಹಕಾರ ನೀಡಲಾಗುವುದು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಕ್ಷಣಾ ಇಲಾಖೆಯ ಇಂಡೊ–ಪೆಸಿಫಿಕ್‌ ಸೆಕ್ಯುರಿಟಿ ಅಫೇರ್ಸ್‌ ವಿಭಾಗದ ಹಂಗಾಮಿ ಸಹಾಯಕ ಕಾರ್ಯದರ್ಶಿ ಡೇವಿಡ್‌ ಹೆಲ್ವಿ ಅವರು ಸೆನೆಟ್‌ನ ಆರ್ಮ್ಡ್‌ ಸರ್ವೀಸಸ್‌ ಕಮಿಟಿ ನಡೆಸಿದ ವಿಚಾರಣೆ ವೇಳೆ ಈ ವಿಷಯ ತಿಳಿಸಿದರು.

‘ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರ ಎಂಬ ಸ್ಥಾನಮಾನವನ್ನು ಭಾರತಕ್ಕೆ ನೀಡಲಾಗಿದೆ. ರಕ್ಷಣೆಗೆ ಸಂಬಂಧಿಸಿ ತಂತ್ರಜ್ಞಾನ, ಶಸ್ತ್ರಾಸ್ತ್ರ ಒದಗಿಸುವ ವಿಷಯದಲ್ಲಿ ಭಾರತಕ್ಕೆ ನೀಡುವ ಸಹಕಾರ ನಿರಂತರವಾಗಿರಲಿದೆ’ ಎಂದೂ ಹೇಳಿದರು.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಜೆ.ಆಸ್ಟಿನ್‌ ಅವರು ಮಾರ್ಚ್‌ 19ರಿಂದ 21ರ ಭಾರತಕ್ಕೆ ಭೇಟಿ ನೀಡುತ್ತಿದ್ದು, ಡೇವಿಡ್‌ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು