ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾಕ್ಕೆ ಸಂದೇಶ: ಜಂಟಿ ಸಮರಾಭ್ಯಾಸಕ್ಕೆ ದ. ಕೊರಿಯಾಗೆ ಬಂದ ಅಮೆರಿಕ ನೌಕೆ

Last Updated 23 ಸೆಪ್ಟೆಂಬರ್ 2022, 2:30 IST
ಅಕ್ಷರ ಗಾತ್ರ

ಬುಸಾನ್‌(ದಕ್ಷಿಣ ಕೊರೊಯಾ): ಉತ್ತರ ಕೊರಿಯಾಕ್ಕೆ ಕಠಿಣ ಸಂದೇಶವನ್ನು ಕಳುಹಿಸುವ ಗುರಿಯನ್ನು ಹೊಂದಿರುವ ಮಿಲಿಟರಿ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಲು ಅಮೆರಿಕದ ವಿಮಾನವಾಹಕ ನೌಕೆ ಶುಕ್ರವಾರ ದಕ್ಷಿಣ ಕೊರಿಯಾಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್‌ಎಸ್‌ ರೊನಾಲ್ಡ್ ರೇಗನ್ ಮತ್ತು ಅದರ ಜೊತೆಗಿರುವ ಸ್ಟ್ರೈಕ್ ಫೋರ್ಸ್‌ ಹಡಗುಗಳು ದಕ್ಷಿಣ ಬಂದರು ನಗರವಾದ ಬುಸಾನ್‌ನಲ್ಲಿರುವ ನೌಕಾ ನೆಲೆಗೆ ಆಗಮಿಸಿವೆ.

ಅಮೆರಿಕದ ಯುದ್ಧ ನೌಕೆಯ ಆಗಮನವು ಉತ್ತರ ಕೊರಿಯಾಗೆ ಎಚ್ಚರಿಕೆ ಸಂದೇಶ ರವಾನಿಸುವ ಮಹತ್ವದ ಹೆಜ್ಜೆಯಾಗಿದೆ.

ಉತ್ತರ ಕೊರಿಯಾಕ್ಕೆ ಎಚ್ಚರಿಕೆಯಾಗಿ ಹೆಚ್ಚಿನ ಜಂಟಿ ಸಮರಾಭ್ಯಾಸಗಳು ಮತ್ತು ಮಿಲಿಟರಿ ಶಕ್ತಿಯ ಇತರ ಪ್ರದರ್ಶನಗಳಿಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್ ಒತ್ತು ನೀಡುತ್ತಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ಅಭಿವೃದ್ಧಿ ಅಂತ್ಯಗೊಳಿಸುವಂತೆ ನಡೆದ ಮಾತುಕತೆಗಳು ವಿಫಲವಾದ ನಂತರ ಈ ವರ್ಷದ ಆರಂಭದಲ್ಲಿ ದಾಖಲೆ ಸಂಖ್ಯೆಯ ಕ್ಷಿಪಣಿ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸಿತ್ತು.

ಉತ್ತರ ಕೊರಿಯಾವು ಪರಮಾಣು ಪರೀಕ್ಷೆಯನ್ನೂ ಪುನರಾರಂಭಿಸಲು ಕೂಡ ತಯಾರಿ ನಡೆಸುತ್ತಿದೆ ಎಂದು ವೀಕ್ಷಕರು ಹೇಳುತ್ತಾರೆ.

ದಕ್ಷಿಣ ಕೊರಿಯಾದಲ್ಲಿ ಅಮೆರಿಕದ ಮಿಲಿಟರಿ ನಿಯೋಜನೆಗಳು ಮತ್ತು ಜಂಟಿ ಸಮರಾಭ್ಯಾಸಗಳನ್ನು ಯುದ್ಧದ ಪೂರ್ವಾಭ್ಯಾಸ ಎಂದಿರುವ ಉತ್ತರ ಕೊರಿಯಾ, ಇದು ವಾಷಿಂಗ್ಟನ್ ಹಾಗೂ ದಕ್ಷಿಣ ಕೊರಿಯಾದ ಪ್ರತಿಕೂಲ ನೀತಿಗಳ ಪುರಾವೆ ಎಂದು ಖಂಡಿಸಿದೆ.

2018ರ ನಂತರ ಅಮೆರಿಕದ ವಿಮಾನವಾಹಕ ನೌಕೆಯೊಂದು ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾಕ್ಕೆ ಬಂದಿದೆ. ಆ ವರ್ಷ, ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುವ ಉದ್ದೇಶದಿಂದ ಉಭಯ ರಾಷ್ಟ್ರಗಳು ತಮ್ಮ ಜಂಟಿ ಮಿಲಿಟರಿ ಚಟುವಟಿಕೆಗಳನ್ನು ಹಿಂಪಡೆದಿದ್ದವು. ಆದರೆ, ಆ ಮಾತುಕತೆಗಳು ಈವರೆಗೆ ಸ್ಥಗಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT